
ಅದೇ ಕ್ಷಣದಲ್ಲಿ ಅವಳ ಮುಂದಿರುವ ನೆಲದ ಭಾಗ ತೆರೆದುಕೊಳ್ಳುತ್ತದೆ. ಅಲ್ಲಿ ಮೆಟ್ರೊ ಬರುತ್ತದೆ. ಮೆಟ್ರೋದ ಒಳಗಿನಿಂದ ಸಿಲಿಂಡರಾಕಾರದ ಎಲಿವೇಟರ್ನಂತಹ ರಚನೆ ಬರುತ್ತದೆ. ಅದರಿಂದ ಬಾಲಕ ನೇರವಾಗಿ ಅಮ್ಮನ ಬಳಿ ಬರುವುದನ್ನು ವಿಡಿಯೋ ತೋರಿಸುತ್ತದೆ.
ಈ ವಿಡಿಯೋ ನೋಡಿದರೆ ನಿಜಕ್ಕೂ ಇಂಥದ್ದೊಂದು ಇದೆಯೇ ಎಂದುಕೊಳ್ಳುವವರು ಹೆಚ್ಚು. ಆದರೆ ಅಸಲಿಗೆ ಇದು ಭವಿಷ್ಯದ ಪರಿಕಲ್ಪನೆಯಷ್ಟೇ, ಜಪಾನಿಗರು ಇಂಥದ್ದೊಂದು ಪರಿಕಲ್ಪನೆಯನ್ನು ಮಾಡಿದ್ದಾರೆ. ಅಷ್ಟಕ್ಕೂ ಜಪಾನಿಗರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಇಂಥದ್ದೊಂದು ಪರಿಕಲ್ಪನೆಗೆ ಸಾಕಾರರೂಪ ಕೊಟ್ಟರೂ ಅಚ್ಚರಿಯಿಲ್ಲ.
ಆದರೆ ಈ ವಿಡಿಯೋ ನೋಡಿ ಹಲವರು ಇದು ಅತ್ಯಂತ ಕೆಟ್ಟ ಪರಿಕಲ್ಪನೆ ಎಂದಿದ್ದಾರೆ. ಮಗುವನ್ನು ಸುಲಭದಲ್ಲಿ ಅಪಹರಿಸಲು ಇದು ಸಹಕಾರಿಯಾಗುತ್ತದೆ ಮಾತ್ರವಲ್ಲದೇ ಇಂಥದ್ದೊಂದು ಪರಿಕಲ್ಪನೆ ಸಾಕಾರಗೊಂಡರೆ ಹಲವಾರು ಸಮಸ್ಯೆಗಳು ಉದ್ಭವವಾಗುತ್ತವೆ ಎಂದಿದ್ದಾರೆ.