alex Certify ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಮಾಲೀಕರಿಗೆ ಐ ಲವ್ ಯು ಸಂದೇಶ ಬರೆದ ಖತರ್ನಾಕ್ ಖದೀಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಮಾಲೀಕರಿಗೆ ಐ ಲವ್ ಯು ಸಂದೇಶ ಬರೆದ ಖತರ್ನಾಕ್ ಖದೀಮ…!

ಗೋವಾ: ಇತ್ತೀಚಿನ ದಿನಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಹಲವು ವಿಲಕ್ಷಣ ಮತ್ತು ಕುತೂಹಲಕಾರಿ ಕಥೆಗಳು ಮುನ್ನೆಲೆಗೆ ಬರುತ್ತಿವೆ. ಅಂತಹ ಒಂದು ಅಸಾಮಾನ್ಯ ಕಳ್ಳತನ ಪ್ರಕರಣದಲ್ಲಿ, ಗೋವಾದ ಬಂಗಲೆಯೊಂದಕ್ಕೆ ನುಗ್ಗಿದ ಖದೀಮರು 20 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಆದರೆ, ವಿಚಿತ್ರವೆಂದರೆ ಕಳ್ಳರು ಮನೆ ಮಾಲೀಕರಿಗೆ ಟಿವಿಯ ಮೇಲೆ ಐ ಲವ್ ಯೂ ಸಂದೇಶವನ್ನು ಬರೆದು ಎಸ್ಕೇಪ್ ಆಗಿದ್ದಾರೆ.

ದಕ್ಷಿಣ ಗೋವಾದ ಮಾರ್ಗೋ ಪಟ್ಟಣದಲ್ಲಿ ಸೋಮವಾರ ಈ ವಿಲಕ್ಷಣ ಘಟನೆ ನಡೆದಿದೆ. ಮನೆಯವರು ಕಾರ್ಯಕ್ರಮಕ್ಕೆಂದು ಹೊರಗೆ ಹೋಗಿದ್ದ ವೇಳೆ ಬಂಗಲೆಯ ಬಾತ್‌ರೂಮ್‌ನ ಗ್ರಿಲ್‌ ಕತ್ತರಿಸಿ ಒಳ ಪ್ರವೇಶಿಸಿದ ಕಳ್ಳರು ಬಂಗಲೆಗೆ ನುಗ್ಗಿದ್ದಾರೆ. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕುಟುಂಬವು ಮನೆಗೆ ಹಿಂದಿರುಗಿದಾಗ ಟಿವಿ ಪರದೆಯ ಮೇಲೆ ಐ ಲವ್ ಯು ಬರೆದಿದ್ದನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಇದನ್ನು ಬರೆದವರು ಯಾರಿರಬಹುದು ಎನ್ನುತ್ತಾ ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದಾಗ ಸಂಪೂರ್ಣ ಅಸ್ತವ್ಯಸ್ತವಾಗಿರುವುದನ್ನು ಗಮನಿಸಿದ್ದಾರೆ.

ಈ ವೇಳೆ ಕಳ್ಳತನವಾಗಿರುವುದು ಅರಿವಿಗೆ ಬಂದಿದೆ. 9 ಜೋಡಿ ಚಿನ್ನದ ಬಳೆಗಳು, ಒಂದು ಸರ, ಎರಡು ನೆಕ್ಲೇಸ್‌ಗಳು, ಬೆಳ್ಳಿ ಬಿಸ್ಕತ್ತು, ಬಳೆಗಳು, ಲಾಕೆಟ್‌ಗಳು, ಮಂಗಳ ಸೂತ್ರ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...