ಬೇಸಿಗೆಯ ಬೇಗೆ ನಿಮ್ಮನ್ನು ಕಂಗಾಲಾಗಿಸಿದೆಯೇ, ತ್ವಚೆ ಸಂರಕ್ಷಣೆ ಹೇಗೆಂದೇ ತಿಳಿಯುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ. ಸರಳ ಸುಲಭ ಫೇಸ್ ಪ್ಯಾಕ್ ಗಳ ಮುಖಾಂತರ ನಿಮ್ಮ ತ್ವಚೆಯ ಸೌಂದರ್ಯವನ್ನು ಮರಳಿ ಪಡೆಯಬಹುದು.
ಹಬ್ಬದಲ್ಲಿ ಶಾಪಿಂಗ್ ಮಾಡಲು ಹಣವಿಲ್ವಾ…? ಚಿಂತೆ ಬೇಡ, ಇಲ್ಲಿ ಸಿಗುತ್ತೆ ಸಾಲ
ಹಣ್ಣುಗಳಲ್ಲಿರುವ ಔಷಧೀಯ ಗುಣಗಳು ಅಪರಿಮಿತ. ನೈಸರ್ಗಿಕವಾಗಿ ದೊರೆಯುವ ಹಣ್ಣುಗಳ ಫೇಸ್ ಪ್ಯಾಕ್ ಮಾಡಿಕೊಂಡರೆ ಚರ್ಮದ ಕಾಂತಿಯೂ ಹೆಚ್ಚುವುದು, ಇದರಿಂದ ಯಾವ ಅಡ್ಡ ಪರಿಣಾಮಗಳು ಇರುವುದಿಲ್ಲ.
ಬಾಳೆಹಣ್ಣನ್ನು ಕಿವುಚಿ ಜೇನು ಹಾಗು ಮೊಸರು ಬೆರೆಸಿ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆಯುವುದರಿಂದ ಮುಖದ ರಂಧ್ರಗಳಲ್ಲಿರುವ ಕೊಳೆ ದೂರವಾಗಿ ಸ್ವಚ್ಛವಾಗುತ್ತದೆ. ಸೇಬಿನ ಸಿಪ್ಪೆಯನ್ನೂ ಹೀಗೆ ಬಳಸಬಹುದು.
ಪಪ್ಪಾಯ ಸಿಪ್ಪೆ ತೆಗೆದು ಹೋಳುಗಳನ್ನು ರುಬ್ಬಿ ಹಾಲು ಬೆರೆಸಿ ಮುಖ, ಕುತ್ತಿಗೆಗೆ ಹಚ್ಚಿಕೊಂಡರೆ ತ್ವಚೆ ಸ್ವಚ್ಛವಾಗಿ ಹೊಳೆಯುತ್ತದೆ. ಫೇಶಿಯಲ್ ನ ಪರಿಣಾಮವನ್ನೂ ಕೊಡುತ್ತದೆ.