alex Certify ಮನೆಯಲ್ಲೇ ಲೂಟಿ ಮಾಡಿದ 8-9 ವರ್ಷದ ಬಾಲಕರು: ಕದ್ದ 4 ಲಕ್ಷ ರೂ. 20 ದಿನದಲ್ಲಿ ಉಡೀಸ್, ಅನುಮಾನ ಬರದಿರಲು ಡುಪ್ಲಿಕೇಟ್ ನೋಟು ಇಟ್ಟ ಪೋರರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಲೂಟಿ ಮಾಡಿದ 8-9 ವರ್ಷದ ಬಾಲಕರು: ಕದ್ದ 4 ಲಕ್ಷ ರೂ. 20 ದಿನದಲ್ಲಿ ಉಡೀಸ್, ಅನುಮಾನ ಬರದಿರಲು ಡುಪ್ಲಿಕೇಟ್ ನೋಟು ಇಟ್ಟ ಪೋರರು..!

ನಾವೆಲ್ಲ ಚಿಕ್ಕವರಿದ್ದಾಗ ಪಾಕೆಟ್ ಮನಿ ಜಾಸ್ತಿ ಅಂದ್ರೆ 5-10 ರೂ. ಅಷ್ಟೇ ಸಿಗೋದು. ಅದಕ್ಕಿಂತ ಹೆಚ್ಚಿಗೆ ಸಿಕ್ಕರೆ ಅದೇ ದೊಡ್ಡ ಹಬ್ಬ. ಆದರೆ ಇಂದಿನ ಮಕ್ಕಳ ಲೈಫ್ ಸ್ಟೈಲೇ ಬದಲಾಗಿದೆ. ಅವರಿಗೆ ಸ್ಮಾರ್ಟ್​ ವಾಚ್​​, ಹೈ-ಫೈ ಮೊಬೈಲ್, ಆನ್ಲೈನ್ ಗೇಮಿಂಗ್, ಕಾಸ್ಟ್ಲಿ ಟಾಯ್ಸ್, ಇದೇ ಹುಚ್ಚು ಹೆಚ್ಚಾಗಿದೆ. ಅದಕ್ಕೆ ನೋಡಿ ತೆಲಂಗಾಣದ ಇಬ್ಬರು ಮಕ್ಕಳು ತಮ್ಮ ಈ ಹುಚ್ಚಾಸೆಗಳನ್ನ ಈಡೇರಿಸಿಕೊಳ್ಳೊದಕ್ಕಂತಾನೇ ಮನೆಯಲ್ಲಿದ್ದ ಹಣವನ್ನೇ ಲಪಟಾಯಿಸಿದ್ದಾರೆ. ಅದು ಕೂಡಾ ಒಂದೆರಡು ರೂಪಾಯಿ ಅಲ್ಲ…….ಬರೋಬ್ಬರಿ 4 ಲಕ್ಷ ರೂಪಾಯಿ.

ಈ ಘಟನೆ ನಡೆದಿರೋದು ತೆಲಂಗಾಣದಲ್ಲಿ. ಇಲ್ಲಿನ ಜಿದಿಮೆಟಲಾದ, ಎಸ್ಆರ್ ನಾಯಕ್ ನಗರದಲ್ಲಿನ ಮಕ್ಕಳು ಅಪ್ಪ-ಅಮ್ಮ ಮನೆಯ ಕಪಾಟಿನಲ್ಲಿ ಹಣ ಇಟ್ಟಿದ್ದನ್ನ ನೋಡಿದ್ದಾರೆ. ಇದನ್ನ ಉಳಿದ ಸ್ನೇಹಿತರ ಬಳಿಯೂ ಹೇಳಿಕೊಂಡಿದ್ದಾರೆ. ಕೊನೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಅದೇ ಕಪಾಟಿನಲ್ಲಿದ್ದ 4 ಲಕ್ಷ ರೂಪಾಯಿಯನ್ನ ಕದ್ದಿದ್ದಾರೆ. ಮನೆಯಲ್ಲಿ ಯಾರಿಗೂ ಅನುಮಾನ ಬರದೇ ಇರಲೆಂದು ಡುಪ್ಲಿಕೇಟ್ ನೋಟು ಇಟ್ಟಿದ್ದಾರೆ. ಆ ಇಬ್ಬರು ಬಾಲಕರಿಗೆ ಈ ಐಡಿಯಾ ಕೊಟ್ಟಿದ್ದು ಅವರ ಸ್ನೇಹಿತರೇ ಅನ್ನೊದು ಪೊಲೀಸರು ತನಿಖೆ ಮಾಡ್ತಿರುವಾಗ ಬಹಿರಂಗವಾಗಿದೆ.

ಕದ್ದ ಹಣದಲ್ಲಿ ಮಕ್ಕಳು ಗೇಮಿಂಗ್ ಸೆಂಟರ್ ಮತ್ತು ರೆಸ್ಟೊರೆಂಟ್​ಗಳಿಗೆ ಹೋಗಿ ಖರ್ಚು ಮಾಡಿದ್ದಾರೆ. ಜೊತೆಗೆ ಸ್ಮಾರ್ಟ್​ವಾಚ್​ ಹಾಗೂ ಮೊಬೈಲ್ಗಳನ್ನ ಖರೀದಿಸಿದ್ದಾರೆ. ಮಕ್ಕಳ ಬಳಿ ಇಷ್ಟು ಕಾಸ್ಟ್ಲಿ ವಸ್ತುಗಳು ಹೇಗೆ ಬಂದವು ಅನ್ನೋ ಅನುಮಾನ ಪಾಲಕರಿಗೆ ಬಂದಿದೆ. ಕೊನೆಗೆ ಮನೆಯ ಲಾಕರ್​​ ಚೆಕ್​ ಮಾಡಿದಾಗ ಮನೆಯಲ್ಲಿ 4 ಲಕ್ಷ ಮಾಯಮಾಗಿರೋದು ಗೊತ್ತಾಗಿದೆ. ಅದರ ಬದಲು ಡುಪ್ಲಿಕೇಟ್ ನೋಟು ಇಟ್ಟಿರೋದು ಪತ್ತೆಯಾಗಿದೆ. ಮಕ್ಕಳನ್ನ ಬೆದರಿಸಿ ಕೇಳಿದಾಗ ಸತ್ಯಾಂಶ ಹೊರ ಬಿದ್ದಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...