ದುಬಾರಿ ಕ್ರೀಮ್ ಗಳನ್ನು ಬಳಸಿ ತ್ವಚೆಯನ್ನು ಹಾಳು ಮಾಡುವ ಬದಲು ಮನೆಯಲ್ಲೇ ಮಾಡಬಹುದಾದ ಒಂದಷ್ಟು ಕ್ರೀಮ್ ಗಳನ್ನು ಬಳಸಿ ಆರೋಗ್ಯವಂತ ತ್ವಚೆ ಪಡೆಯುವುದು ಹೇಗೆಂದು ನೋಡೋಣ.
ಬಾದಾಮಿಯನ್ನು ಒಣ ಬೀಜಗಳ ರಾಜ ಎಂದು ಕರೆಯುತ್ತಾರೆ. ಇದು ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವರ್ಧಕವೂ ಹೌದು. ದಿನ ರಾತ್ರಿ ಎಂಟು ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ಬಳಿಕ ಅದರ ಸಿಪ್ಪೆ ತೆಗೆಯಿರಿ. ಅದನ್ನು ಮಿಕ್ಸಿಗೆ ಹಾಕಿ ಗುಲಾಬಿ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿ. ಬಳಿಕ ಬಾದಾಮಿ ಪೇಸ್ಟ್ ಹಿಂಡಿ ರಸ ತೆಗೆಯಿರಿ.
ಈ ರಸಕ್ಕೆ ಎರಡು ಚಮಚ ಬಾದಾಮಿ ಎಣ್ಣೆ ಬೆರೆಸಿ. ಎರಡು ವಿಟಮಿನ್ ಕ್ಯಾಪ್ಸೂಲ್ ಒಳಗಿರುವ ದ್ರಾವಣ ಹಾಕಿ ಬೆರೆಸಿ. ತುಸು ಅಲೋವೆರಾ ಜೆಲ್ ಅನ್ನು ಹಾಕಿ ಪೇಸ್ಟ್ ರೀತಿಯಲ್ಲಿ ಮಿಕ್ಸ್ ಮಾಡಿ. ಇದನ್ನು ಸಣ್ಣ ಬಾಕ್ಸಿಗೆ ಹಾಕಿಡಿ.
ಪ್ರತಿದಿನ ರಾತ್ರಿ ಮಲಗುವ ವೇಳೆ ಇದನ್ನು ಮುಖಕ್ಕೆ ಲೇಪಿಸಿ ಮುಂಜಾನೆ ಇದನ್ನು ತೊಳೆಯಿರಿ. ಮಲಗುವ 15 ನಿಮಿಷ ಮುಂಚೆ ಹಾಕಿ ಮಸಾಜ್ ಮಾಡಿ. ಫ್ರಿಡ್ಜ್ ನಲ್ಲಿಟ್ಟು 20 ದಿನಗಳ ತನಕ ಈ ಕ್ರೀಮನ್ನು ಬಳಸಬಹುದು.