ಫೇಸ್ ಮಾಸ್ಕ್ ಗಳು ಸೌಂದರ್ಯವರ್ಧನೆಗೆ ಬಲು ಉಪಕಾರಿ. ಒತ್ತಡದಿಂದ, ಮಾಲಿನ್ಯದಿಂದ, ಅನಾರೋಗ್ಯಕರ ಆಹಾರ ಸೇವನೆಯಿಂದ, ಕುಡಿತ ಮೊದಲಾದ ಮಾದಕ ದ್ರವ್ಯ ಸೇವನೆಯಿಂದ ಬಸವಳಿದ ತ್ವಚೆಗೆ ಮತ್ತೆ ಹೊಳಪು ನೀಡುವ ಗುಣವಿರುವುದು ಫೇಸ್ ಮಾಸ್ಕ್ ಗಳಿಗೆ. ಅಂತಹ ಕೆಲವು ಮಾಸ್ಕ್ ಗಳು ಇಲ್ಲಿವೆ.
ಮಿ.ಬೀನ್‌ನಂತೆಯೇ ಇದ್ದಾರೆ ಈ ಅಪ್ಪ-ಮಗಳ ಜೋಡಿ
ಕಾಫಿಯ ಮಾಸ್ಕ್: ಯೌವ್ವನಯುತ ತ್ವಚೆ ಪಡೆಯಲು ನೆರವಾಗುವ ಇದನ್ನು ಎಲ್ಲಾ ರೀತಿಯ ಚರ್ಮ ಹೊಂದಿರುವವರೂ ಪ್ರಯತ್ನಿಸಬಹುದು. ಇದಕ್ಕೆ ಡಿಕಾಕ್ಷನ್, ಜೇನು ಹಾಗೂ ಹಾಲು ಬೆರೆಸಿದರೆ ಸಾಕು. ವಾರಕ್ಕೆರಡು ಬಾರಿ ಲೇಪಿಸಿ. ತಣ್ಣೀರಿನಿಂದ ತೊಳೆಯಿರಿ.
ಓಟ್ಸ್, ಮೊಸರು ಹಾಗು ಜೇನು ಬೆರೆಸಿ ಹಚ್ಚುವುದರಿಂದ ಸೆನ್ಸಿಟಿವ್ ತ್ವಚೆಗೂ ಉತ್ತಮ ಪರಿಣಾಮ ಬೀರುತ್ತದೆ. ಇದು ಕ್ಲೆನ್ಸಿಂಗ್ ನ ಪ್ರಭಾವವನ್ನೇ ಬೀರುತ್ತದೆ.
ಅವಕೊಡೋ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೇ, ತ್ವಚೆಗೆ ಹೊಳಪು ನೀಡುವ ಗುಣವೂ ಇದೆ. ಹಾಗಾಗಿ ಇದಕ್ಕೆ ಒಂದು ಚಮಚ ಮೊಸರು ಮತ್ತು ಜೇನು ಸೇರಿಸಿ ಹಚ್ಚಿ 20 ನಿಮಿಷದ ಬಳಿಕ ತೊಳೆಯುವುದರಿಂದ ಮುಖ ಹೊಳಪು ಪಡೆದುಕೊಳ್ಳುತ್ತದೆ.
ಸುಂದರವಾಗಿ ಕಾಣಲು ಮನೆಯಲ್ಲಿಯೇ ಮಾಡಿ ʼಫೇಶಿಯಲ್ʼ
ಬಾಳೆಹಣ್ಣಿನ ಮಾಸ್ಕ್, ಮೊಟ್ಟೆ ಮತ್ತು ಜೇನಿನ ಮಾಸ್ಕ್, ಹಾಲು ಮತ್ತು ಜೇನಿನ ಮಾಸ್ಕ್, ಆಲಿವ್ ಎಣ್ಣೆಯ ಮಾಸ್ಕ್ ಕೂಡಾ ಪ್ರಯತ್ನಿಸಿ ಅತ್ಯುತ್ತಮ ಪರಿಣಾಮಗಳನ್ನು ಕಂಡುಕೊಳ್ಳಬಹುದು.