ಬೇಕಾಗುವ ಸಾಮಗ್ರಿ : 2 ಕಪ್ ಹಾಲು, ಕಸ್ಟರ್ಡ್ ಪುಡಿ 2 ಟೇಬಲ್ ಸ್ಪೂನ್, ಸಕ್ಕರೆ 1/2 ಕಪ್, ವಿಪ್ಪಿಂಗ್ ಕ್ರೀಂ – 200 ಎಂ.ಎಲ್
ಮಾಡುವ ವಿಧಾನ : ಹಾಲನ್ನ ಕುದಿಯಲು ಇಡಿ. ಇನ್ನೊಂದು ಪಾತ್ರೆಯಲ್ಲಿ ನಿಮ್ಮಿಷ್ಟದ ಫ್ಲೇವರಿನ ಕಸ್ಟರ್ಡ್ ಪೌಡರ್ನ್ನು ತೆಗೆದುಕೊಂಡು ಇದನ್ನ 1/2 ಕಪ್ ಹಾಲಿನೊಂದಿಗೆ ಮಿಶ್ರಣ ಮಾಡಿ. ಈಗ ಕುದಿಯುತ್ತಿರುವ ಹಾಲಿಗೆ ಕಸ್ಟರ್ಡ್ ಪುಡಿಯ ಮಿಶ್ರಣವನ್ನ ಹಾಕಿ. ಈ ರೀತಿ ಮಾಡುವ ವೇಳೆ ಗಂಟು ಆಗದಂತೆ ನೋಡಿಕೊಳ್ಳಿ. ಹಾಗೂ ಮಧ್ಯಮ ಬಿಸಿಯಲ್ಲಿ ಹಾಲನ್ನ ಕಾಯಿಸಿ. ಈಗ ಇದಕ್ಕೆ ಸಕ್ಕರೆಯನ್ನ ಹಾಕಿ. ಚೆನ್ನಾಗಿ ಕಲಿಸಿ. ಈ ರೀತಿ ಹಾಲನ್ನ 7 ನಿಮಿಷ ಕುದಿಸಿ.
ಹಾಲನ್ನ ತಣ್ಣಗಾಗಲು ಬಿಟ್ಟು ಬಳಿಕ ಈ ಮಿಶ್ರಣವನ್ನ ಫ್ರೀಜರ್ನಲ್ಲಿ ಅರ್ಧ ಗಂಟೆಗಳ ಕಾಲ ಇಡಿ. ಈಗ ಇನ್ನೊಂದು ಪಾತ್ರೆಯನ್ನ ಫ್ರೀಜರ್ನಲ್ಲಿ ಇಟ್ಟು ತಣ್ಣ ಮಾಡಿಕೊಳ್ಳಿ. ಬಳಿಕ ಈ ಖಾಲಿ ಪಾತ್ರೆಯನ್ನ ಹೊರ ತೆಗೆದು ಅದಕ್ಕೆ ವಿಪ್ಪಿಂಗ್ ಕ್ರೀಂನ್ನು ಹಾಕಿ. ಇದನ್ನ ಬ್ಲೆಂಡರ್ನಿಂದ ಬ್ಲೆಂಡ್ ಮಾಡಿ. ಇದಕ್ಕೆ ಫ್ರೀಜರ್ನಲ್ಲಿದ್ದ ಕಸ್ಟರ್ಡ್ ಮಿಶ್ರಣವನ್ನ ಹಾಕಿ. ಮತ್ತೊಮ್ಮೆ ಬ್ಲೆಂಡ್ ಮಾಡಿ. ಬ್ಲೆಂಡರ್ ಮಷಿನ್ ಇಲ್ಲದವರು ಮಿಕ್ಸಿಯನ್ನೂ ಬಳಕೆ ಮಾಡಬಹುದು. ಈಗ ಮಿಶ್ರಣದ ಪಾತ್ರೆಗೆ ಫಾಯಿಲ್ ಶೀಟ್ನಿಂದ ಮುಚ್ಚಿ. ಇದೀಗ ಮತ್ತೆ ಫ್ರೀಜರ್ನಲ್ಲಿ ಮೂರು ಗಂಟೆಗಳ ಕಾಲ ಈ ಮಿಶ್ರಣವನ್ನ ಇಡಿ. ಇದನ್ನ ಮತ್ತೆ ಬ್ಲೆಂಡ್ ಮಾಡಿ.
ಈಗ ಈ ಮಿಶ್ರಣವನ್ನ ಇನ್ನೊಂದು ಪಾತ್ರೆಯಲ್ಲಿ ಹಾಕಿ ಅದರ ಮೇಲೆ ಫಾಯಿಲ್ ಶೀಟ್ ಹಾಕಿ ಬಳಿಕ ಮುಚ್ಚಳ ಹಾಕಿ 6 ಗಂಟೆಗಳ ಕಾಲ ಇಡಿ, ಇದೀಗ ನಿಮ್ಮ ಐಸ್ಕ್ರೀಂ ಸವಿಯಲು ಸಿದ್ಧ, ಟೂಟಿ ಫ್ರೂಟಿಯನ್ನ ಹಾಕಿ ನೀವು ಐಸ್ ಕ್ರೀಂನ್ನು ಅಲಂಕರಿಸಿ.