ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ.
ನೀರು
ಪ್ರತಿ ದಿನ ಮಲಗುವ ಮೊದಲು ಹಾಗೂ ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಅದನ್ನು ತಡೆಗಟ್ಟಬಹುದು.
ಬಾಳೆಹಣ್ಣು
ಒಳ್ಳೆಯ ಹಣ್ಣಾದ ಇಲ್ಲವೇ ಕಪ್ಪು ಚುಕ್ಕೆ ಇರುವ ಬಾಳೆಹಣ್ಣು ತಿನ್ನುವುದರಿಂದ ಅಸಿಡಿಟಿ ನಿವಾರಣೆ ಮಾಡಬಹುದು. ಯಾಕೆಂದರೆ ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಸಿಡಿಟಿಯನ್ನು ದೂರ ಮಾಡುತ್ತದೆ.
ಹಾಲು
ಏನನ್ನು ಸೇರಿಸದೆ ತಣ್ಣಗಿನ ಹಾಲನ್ನು ಕುಡಿಯಬೇಕು. ಬೇಕಿದ್ದರೆ ಒಂದು ಚಮಚ ಬೆಣ್ಣೆಯೊಂದಿಗೆ ಸೇವಿಸಿದರೆ ಅಸಿಡಿಟಿಗೆ ಮತ್ತಷ್ಟು ಒಳ್ಳೆಯದು.
ಮುತ್ತಿಕ್ಕುವಾಗ ಕಣ್ಮುಚ್ಚಿಕೊಳ್ಳುವುದೇಕೆ ಗೊತ್ತಾ……?
ಜೀರಿಗೆ
ಜೀರಿಗೆ ಸಹ ಅಸಿಡಿಟಿಯನ್ನು ನಿವಾರಿಸುವ ಉತ್ತಮ ಪದಾರ್ಥ. ಜೀರಿಗೆ ಸೇವನೆಯಿಂದ ಜೀರ್ಣ ಪ್ರಕ್ರಿಯೆಗೆ ನೆರವು ದೊರೆಯುತ್ತದೆ. ಅಲ್ಲದೆ, ಅಗತ್ಯವಾದ ಲಾಲಾರಸವನ್ನು ಅದು ಉತ್ಪತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ ಕುಡಿಯುವುದರಿಂದ ಅಸಿಡಿಟಿ ನಿವಾರಿಸಿಕೊಳ್ಳಬಹುದು.
ತುಳಸಿ
ತುಳಸಿ ಎಲೆಗಳಲ್ಲಿ ಇರುವಂತಹ ಶಮನಕಾರಿ ಗುಣವು ಅಸಿಡಿಟಿ ಹಾಗೂ ಹೊಟ್ಟೆಯ ಗ್ಯಾಸ್ ಮತ್ತು ವಾಕರಿಕೆಯಿಂದ ಮುಕ್ತಿಯನ್ನು ನೀಡುತ್ತದೆ. ತುಳಸಿಯ ಕೆಲವು ಎಲೆಗಳನ್ನು ಜಗಿದ ಬಳಿಕ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ದಿನದಲ್ಲಿ ಹಲವಾರು ಬಾರಿ ಹೀಗೆ ಮಾಡಿದರೆ ಅಸಿಡಿಟಿಗೆ ಮುಕ್ತಿ ಸಿಗುತ್ತದೆ.