
ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ:
ಮೂರು ಲೀಟರ್ ಹಾಲು
2 ಚಮಚ ಲಿಂಬೆ ಹಣ್ಣಿನ ರಸ
1 ಚಮಚ ಏಲಕ್ಕಿ ಪುಡಿ
1 ಚಮಚ ತುಪ್ಪ
250 ಗ್ರಾಂ ಸಕ್ಕರೆ
ಸ್ವಲ್ಪ ಎಣ್ಣೆ, ಅಲಂಕಾರಕ್ಕೆ ಬಾದಾಮಿ.
ಮಿಲ್ಕ್ ಕೇಕ್ ಮಾಡುವ ವಿಧಾನ: ಒಂದು ಪಾತ್ರೆಗೆ ಹಾಲನ್ನು ಹಾಕಿ ಬಿಸಿ ಮಾಡಿ. ನಂತ್ರ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಹಾಕಿ. ಹಾಲು ಒಡೆಯಲು ಶುರುವಾಗುವವರೆಗೆ ಕೈ ಆಡಿಸುತ್ತಿರಿ.
ನಂತ್ರ ಏಲಕ್ಕಿ ಪುಡಿ, ತುಪ್ಪ, ಸಕ್ಕರೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ ಬೇಯಿಸಿ. ಪಾತ್ರೆಯ ತಣಕ್ಕೆ ಇದು ಹಿಡಿಯದಂತೆ ನೋಡಿಕೊಳ್ಳಿ. ಹದ ಬಂದ ಮೇಲೆ ಒಂದು ಪ್ಲೇಟ್ ಗೆ ಎಣ್ಣೆ ಸವರಿ ಈ ಮಿಶ್ರಣವನ್ನು ಅದರ ಮೇಲೆ ಸವರಿ. ಅಲಂಕಾರಕ್ಕೆ ಅದ್ರ ಮೇಲೆ ಬಾದಾಮಿ ಉದುರಿಸಿ. ರಾತ್ರಿ ಪೂರ್ತಿ ಇದನ್ನು ಮುಚ್ಚಿಡಿ. ಬೆಳಿಗ್ಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಸರ್ವ್ ಮಾಡಿ.