alex Certify ಮನೆಯಲ್ಲಿ ಸೃಷ್ಟಿಯಾಯ್ತು ದೇವಿಯ ಉದ್ಭವ ಮೂರ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಸೃಷ್ಟಿಯಾಯ್ತು ದೇವಿಯ ಉದ್ಭವ ಮೂರ್ತಿ..!

ಧಾರವಾಡ: ಆ ಮನೆಯಲ್ಲಿ ದೇವಿಯ ಉದ್ಭವ ಮೂರ್ತಿ ಸೃಷ್ಡಿಯಾಗಿದೆ. ಹೀಗಾಗಿ ನಿತ್ಯ ಸಾವಿರಾರು ಜನ ಬಂದು ಸರತಿ ಸಾಲಿನಲ್ಲಿ ನಿಂತು ಪೂಜೆ ಮಾಡಿಸುತ್ತಿದ್ದಾರೆ. ಈ ಘಟನೆ ನಡೆದಿರೋದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೆಟ್ಟಿ ಕೊಪ್ಪ ಗ್ರಾಮದ ಬಸವರಾಜ್ ಕಲಭಾವಿ ಅವರ ಮನೆಯಲ್ಲಿ. ಇವರ ಮನೆಯಲ್ಲಿ ದ್ಯಾಮಮ್ಮನ ಉದ್ಭವ ಮೂರ್ತಿ ಸೃಷ್ಟಿಯಾಗಿದೆ.

ಹೌದು, ಇವರ ಮನೆಯ ಕೋಣೆಯೊಂದರ ಮೂಲೆಯಲ್ಲಿ ದೇವಿ ಮೂರ್ತಿ ಸೃಷ್ಟಿಯಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ದ್ಯಾಮಮ್ಮನ ಉದ್ಭವ ಮೂರ್ತಿ ಉದ್ಭವವಾಗಿದ್ದು, ನಿತ್ಯ ದ್ಯಾಮಮ್ಮನಿಗೆ ಅಲಂಕಾರ ಮಾಡಿ ಪೂಜೆ ಮಾಡುತ್ತಿದ್ದಾರೆ. ಇನ್ನು ಈ ಪವಾಡ ನೋಡಿದ ಗ್ರಾಮದ ಜನರು, ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗ್ತಾ ಇದ್ದಾರೆ.

ಇನ್ನು ಬಸವರಾಜ್ ಅವರಿಗೆ ಕಳೆದ ಒಂದು ವರ್ಷದಿಂದ ಮೈಮೇಲೆ ದೇವಿ ಬರ್ತಿದ್ದಾಳಂತೆ. ದೇವರು ಬಂದ ಸಮಯದಲ್ಲಿ ದ್ಯಾನಮ್ಮ ದೇವಿ ನಾನು ನಿಮ್ಮ ಮನೆಯಲ್ಲಿ ಉದ್ಭವ ಮೂರ್ತಿಯಾಗ್ತೀನಿ ಎಂದು ಹೇಳ್ತಾ ಇದ್ದಳಂತೆ. ಜೊತೆಗೆ ನಾನು ಹೇಳೋವರೆಗೂ ಕೋಣೆ ತೆರೆಯಬೇಡಿ ಎಂದು ಹೇಳಿದ್ದಳಂತೆ. ತದನಂತರ ಕೋಣೆ ತೆರೆಯುವಂತೆ ಹೇಳಿದ್ದಳಂತೆ. ಕೋಣೆ ತೆರೆದು ನೋಡಿದಾಗ ಮೂರ್ತಿ ಸೃಷ್ಟಿಯಾಗಿದೆ. ಅನೇಕರು ಇಲ್ಲಿಗೆ ಬಂದು ಕೈ ಮುಗಿದು ಹೋದ್ರೆ, ಬಸವರಾಜ್ ಅವರೇ ಜನರನ್ನು ಸೆಳೆಯಲು ಹೀಗೆ ಮಾಡಿದ್ದಾರೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...