ಖೋವಾ ಅನ್ನು ಸಾಮಾನ್ಯವಾಗಿ ಹೆಚ್ಚಿನ ಸಿಹಿ ಪದಾರ್ಥಗಳಿಗೆ ಬಳಸುತ್ತವೆ. ಇದನ್ನು ಮಾರುಕಟ್ಟೆಯಿಂದ ತರುವುದಕ್ಕಿಂತ ಥಟ್ಟಂತ ಮನೆಯಲ್ಲಿ ಮಾಡಿಬಿಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಹಾಲಿನ ಪುಡಿ – 1 ಕಪ್, ತುಪ್ಪ – 1 ಟೇಬಲ್ ಸ್ಪೂನ್, ಹಾಲು – 4 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಗೂ ಹಾಲು ಹಾಕಿ ತುಸು ಉಗುರು ಬೆಚ್ಚಗೆ ಮಾಡಿಕೊಳ್ಳಿ. ನಂತರ ಒಂದು ಬೌಲ್ ಗೆ ಹಾಲಿನ ಪುಡಿ ಸೇರಿಸಿ ಅದಕ್ಕೆ ಸ್ವಲ್ಪ ಸ್ವಲ್ಪವೇ ಬಿಸಿ ಮಾಡಿಕೊಂಡ ಹಾಲು ಸೇರಿಸಿ ಮುದ್ದೆ ರೀತಿ ನಾದಿಕೊಳ್ಳಿ.
ಇದು ಅಂಟು ಅಂಟಾಗಿದ್ದರೆ ಸ್ವಲ್ಪ ಹಾಲಿನ ಪುಡಿ ಸೇರಿಸಿಕೊಳ್ಳಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ಏನಾದರೂ ಸ್ವೀಟ್ ಮಾಡುವಾಗ ಬಳಸಿಕೊಳ್ಳಬಹುದು.