ಜೀವನದಲ್ಲಿ ಕಷ್ಟಗಳು ಎದುರಾದಾಗ ಮನುಷ್ಯ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಆಗ ಜೀವನದಲ್ಲಿ ಹಣದ ಸಮಸ್ಯೆ, ಅನಾರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಹೀಗೆ ಹಲವು ಸಮಸ್ಯೆಗಳು ಕಾಡುತ್ತದೆ. ಇಂತಹ ಸಮಸ್ಯೆಗಳು ತೊಲಗಿ ಜೀವನದಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿ ತುಳಕಲು ಮನೆಯಲ್ಲಿ ಗಣಪತಿಯನ್ನು ಈ ರೀತಿ ಪೂಜಿಸಿ.
ಗಣಪತಿ ವಿಘ್ನವಿನಾಶಕ ಎಂದು ಕರೆಯುತ್ತಾರೆ. ಗಣಪತಿ ನಮ್ಮ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ನಿವಾರಿಸುತ್ತಾನೆ. ಆದಕಾರಣ ಗಣಪತಿಯನ್ನು ಈ ರೂಪದಲ್ಲಿ ಮನೆಯ ಈ ದಿಕ್ಕಿನಲ್ಲಿಟ್ಟು ಪೂಜೆ ಮಾಡಿ ಮಂತ್ರವನ್ನು ಜಪಿಸಿ.
ವೀಳ್ಯದೆಲೆಯ ಮೇಲೆ ಅರಿಶಿನದಿಂದ ಗಣಪತಿಯನ್ನು ರಚಿಸಿ. ಇದನ್ನು ಹರಿದ್ರ ಗಣಪತಿ ಎಂದು ಕರೆಯುತ್ತಾರೆ. ಅದಕ್ಕೆ ಕುಂಕುಮವಿಟ್ಟು ಮನೆಯ ನೈರುತ್ಯ ದಿಕ್ಕಿನಲ್ಲಿಟ್ಟು “ಓಂ ಸಂಕಷ್ಟನಾಶಕ ಗಣೇಶಾಯ ನಮಃ” ಈ ಮಂತ್ರವನ್ನು ಜಪಿಸುತ್ತಾ ಅಕ್ಷತೆ ಕಾಳನ್ನು ಹಾಕುತ್ತಾ ಪೂಜಿಸಿ. ಮರುದಿನ ಅದನ್ನು ಹರಿಯುವ ನದಿಯಲ್ಲಿ ಬಿಡಬೇಕು.