ಮನೆಯಲ್ಲಿಯೇ ಸುಲಭವಾಗಿ ವೆನಿಲ್ಲಾ ಐಸ್ ಕ್ರಿಂ ಮಾಡಿಕೊಂಡು ಸವಿಯಿರಿ, ಮಾಡುವ ವಿಧಾನ ಇಲ್ಲಿದೆ ನೋಡಿ.
ಹಾಲು -2 ½ ಕಪ್, ಸಕ್ಕರೆ ಪುಡಿ- 3/4 ಕಪ್, ವೆನಿಲ್ಲಾ ಎಸೆನ್ಸ್- 1 ಟೀ ಸ್ಪೂನ್, ಕಾರ್ನ್ ಫ್ಲೋರ್- 1 ಟೇಬಲ್ ಸ್ಪೂನ್, ಜಿಲೆಟಿನ್- 1 ಟೀ ಸ್ಪೂನ್, ಕ್ರೀಂ- 1 ಕಪ್.
2 ಟೇಬಲ್ ಸ್ಪೂನ್ ತಣ್ಣಗಿನ ಹಾಲಿಗೆ ಕಾರ್ನ್ ಪ್ಲೋರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಜಿಲೆಟಿನ್ ಅನ್ನು 2 ಟೇಬಲ್ ಸ್ಪೂನ್ ಉಗುರು ಬೆಚ್ಚಗಿನ ನೀರಿನೊಂದಿಗೆ 5 ನಿಮಿಷಗಳ ಕಾಲ ನೆನೆಸಿಡಿ. ನಂತರ 1 ಬೌಲ್ ಬಿಸಿ ನೀರಿನೊಂದಿಗೆ ಈ ಜಿಲೆಟಿನ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಕರಗಿದಂತೆ ಆಗುತ್ತದೆ.
ನಂತರ ಹಾಲನ್ನು ಗ್ಯಾಸ್ ಮೇಲೆ ಇಟ್ಟು ಕುದಿಸಿಕೊಳ್ಳಿ. ಇದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕಾರ್ನ್ ಫ್ಲೋರ್ ಅನ್ನು ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಚೆನ್ನಾಗಿ ಕೈಯಾಡಿಸಿ. ಹಾಲು ದಪ್ಪಗಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ಹಾಲಿನ ಮಿಶ್ರಣ ಉಗುರು ಬೆಚ್ಚಗೆ ಇರುವಾಗ ಜಿಲೆಟಿನ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಫ್ರಿಜರ್ ನಲ್ಲಿ 2 ಗಂಟೆಗಳ ಕಾಲ ಇಡಿ. ನಂತರ ಇದಕ್ಕೆ ಕೆನೆ, ವೆನಿಲ್ಲಾ ಎಸೆನ್ಸ್ ಹಾಕಿ ಒಂದು ಸೌಟಿನ ಸಹಾಯದಿಂದ ಚೆನ್ನಾಗಿ ಬೀಟ್ ಮಾಡಿಕೊಂಡು ಈ ಮಿಶ್ರಣವನ್ನು ಒಂದು ಅಲ್ಯುಮಿನಿಯಂ ಟ್ರೇ ಮೇಲೆ ಹಾಕಿಕೊಂಡು ಫ್ರಿಜರ್ ನಲ್ಲಿಡಿ. ಇದು ಅರ್ಧ ಸೆಟ್ ಆಗುತ್ತಿದ್ದಂತೆ ಮತ್ತೆ ಹೊರ ತೆಗೆದು ಬೀಟ್ ಮಾಡಿಕೊಳ್ಳಿ. ಹೀಗೆ 3 ಸಲ ಚೆನ್ನಾಗಿ ಬೀಟ್ ಮಾಡಿಕೊಂಡು ಫ್ರಿಜರ್ ನಲ್ಲಿಡಿ. ನಂತರ ಸರ್ವ್ ಮಾಡಿದರೆ ರುಚಿಕರವಾದ ವೆನಿಲ್ಲಾ ಐಸ್ ಕ್ರೀಂ ಸವಿಯಲು ಸಿದ್ಧ.