alex Certify ಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಉದ್ದಿನ ವಡೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಉದ್ದಿನ ವಡೆ’

ಇಡ್ಲಿಯ ಜೊತೆಯಲ್ಲಿ ಉದ್ದಿನ ವಡೆ ಕಾಂಬಿನೇಷನ್ ಇದ್ದರೆ ಚೆನ್ನ.ಸಾಂಬಾರ್, ಚಟ್ನಿಯ ಜೊತೆಯಲ್ಲಿ ಉದ್ದಿನ ವಡೆ ತಿನ್ನಲು ಬಲು ರುಚಿಯಾಗಿರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಉದ್ದಿನ ವಡೆಯ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು :

ಉದ್ದಿನ ಬೇಳೆ- ಅರ್ಧ ಕೆ.ಜಿ., ತೆಂಗಿನ ಕಾಯಿ ತುರಿ- 2 ಹಿಡಿ, ಅಕ್ಕಿಹಿಟ್ಟು- 1 ಬಟ್ಟಲು, ಶುಂಠಿ- 1 ಚೂರು, ಹಸಿ ಮೆಣಸಿನಕಾಯಿ- 10, ಕೊತ್ತಂಬರಿ ಸೊಪ್ಪು- ಅರ್ಧ ಕಟ್ಟು, ಕರಿಬೇವು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು,  ಕಾಳು ಮೆಣಸು – 8, ಅಡಿಗೆ ಸೋಡಾ- ಸ್ವಲ್ಪ, ಕರಿಯಲು ಎಣ್ಣೆ.

ಮತ್ತೊಂದು ರೂಪದಲ್ಲಿ ವಿಶ್ವವಿಖ್ಯಾತ ʼಮನಿಕೆ ಮಗೆ ಹಿತೆʼ ಹಾಡು

ತಯಾರಿಸುವ ವಿಧಾನ :

ಕ್ಲೀನ್ ಮಾಡಿದ ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಸಿರಿ. ಸುಮಾರು 3 ತಾಸು ನೆನೆದ ನಂತರ, ನೀರನ್ನು ಬಸಿಯಿರಿ, ಉದ್ದಿನ ಬೇಳೆಗೆ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡ ಹಿಟ್ಟಿಗೆ ಕುಟ್ಟಿ ಪುಡಿ ಮಾಡಿದ ಮೆಣಸಿನ ಕಾಳು, ಸಣ್ಣಗೆ ಹೆಚ್ಚಿಕೊಂಡ ತೆಂಗಿನ ಕಾಯಿ, ಹಸಿ ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಹಸಿ ಮೆಣಸಿನ ಕಾಯಿ ಹಾಕಿ ಕಲೆಸಿಕೊಳ್ಳಿರಿ.

ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಡಿ. ಎಣ್ಣೆ ಕಾದ ನಂತರ ಒಂದು ಎಲೆಯಲ್ಲಿ ಹಿಟ್ಟು ಹಾಕಿ, ತಟ್ಟಿ ಮಧ್ಯಭಾಗದಲ್ಲಿ ತೂತು ಮಾಡಿ, ಒಂದೊಂದೇ ವಡೆಯನ್ನು ಎಣ್ಣೆಯಲ್ಲಿ ನಿಧಾನವಾಗಿ ಬಿಡಿ. ಕೆಂಪಗೆ ಆದ ನಂತರ ಜಾಲರಿಯಿಂದ ತೆಗೆಯಿರಿ. ಚಟ್ನಿ, ಸಾಂಬಾರ್ ಜೊತೆಗೆ ತಿನ್ನಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...