ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ದಿನಾ ಅಡುಗೆಗೆ ಉಪಯೋಗಿಸುತ್ತಲೇ ಇರುತ್ತೇವೆ. ಇದನ್ನು ದಿನಾ ರೆಡಿ ಮಾಡುವುದು ಅಂದರೆ ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಮನೆಯಲ್ಲಿ ಶುಂಠಿ ಇರುವುದಿಲ್ಲ. ಈ ಎಲ್ಲಾ ಕಿರಿಕಿರಿ ತಪ್ಪಿಸಲು ಒಂದಷ್ಟು ದಿನಕ್ಕಾಗುವಷ್ಟು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ಮನೆಯಲ್ಲಿ ತಯಾರಿಸಿಕೊಂಡು ಸ್ಟೋರ್ ಮಾಡಿಟ್ಟುಕೊಳ್ಳಿ.
250 ಗ್ರಾಂ ನಷ್ಟು ಶುಂಠಿ, 250 ಗ್ರಾಂ ನಷ್ಟು ಬೆಳ್ಳುಳ್ಳಿ, 2 ಟೀ ಸ್ಪೂನ್ ನಷ್ಟು ಕಲ್ಲುಪ್ಪು, 3 ಟೇಬಲ್ ಸ್ಪೂನ್ ನಷ್ಟು ಕಡಲೆಕಾಯಿ ಎಣ್ಣೆ.
ಬೆಳ್ಳಳ್ಳಿ ಸಿಪ್ಪೆಯಯನ್ನು ಬಿಡಿಸಿಕೊಳ್ಳಿ. ಶುಂಠಿಯನ್ನು ಚೆನ್ನಾಗಿ ತೊಳೆದು ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಇವೆರೆಡನ್ನೂ ಒಂದು ಮಿಕ್ಸಿ ಜಾರಿಗೆ ಹಾಕಿ ಕಲ್ಲುಪ್ಪು, ಎಣ್ಣೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದು ಬಣ್ಣ ಬದಲಾಗುವವರಗೆ ರುಬ್ಬಬೇಡಿ. ಇದನ್ನು ಒಂದು ಗ್ಲಾಸಿನ ಡಬ್ಬಕ್ಕೆ ತುಂಬಿಸಿಕೊಂಡು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ. ಅಡುಗೆ ಮಾಡುವಾಗ ಉಪಯೋಗಿಸಿ.