alex Certify ಮನಸ್ಸಿದ್ದಲ್ಲಿ ಮಾರ್ಗ: ಜೈಲಿನಲ್ಲೇ ಓದಿ ಐಐಟಿ ಪರೀಕ್ಷೆಯಲ್ಲಿ 54ನೇ ರ್ಯಾಂಕ್​ ಗಳಿಸಿದ ಕೈದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿದ್ದಲ್ಲಿ ಮಾರ್ಗ: ಜೈಲಿನಲ್ಲೇ ಓದಿ ಐಐಟಿ ಪರೀಕ್ಷೆಯಲ್ಲಿ 54ನೇ ರ್ಯಾಂಕ್​ ಗಳಿಸಿದ ಕೈದಿ..!

ಮನಸಿದ್ದಲ್ಲಿ ಮಾರ್ಗ ಎಂಬ ಮಾತಿದೆ. ಬಿಹಾರದ ನವಾಡ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯು ಐಐಟಿ 2022ರ ಜಂಟಿ ಪ್ರವೇಶಾತಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 54 ನೇ ರ್ಯಾಂಕ್​ ಗಳಿಸುವ ಮೂಲಕ ಈ ಮಾತನ್ನು ಸಾಬೀತುಪಡಿಸಿದ್ದಾರೆ. ಕೈದಿ ಸೂರಜ್​ ಕುಮಾರ್​ ಎಂಬವರು ಐಐಟಿ – ಜೆಎಎಂ ಪರೀಕ್ಷೆಯಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.

ಐಐಟಿಗಳಲ್ಲಿ ಮಾಸ್ಟರ್​ ಆಫ್​ ಸೈನ್ಸ್​ ಸೇರಿದಂತೆ ಇತರೆ ಯಾವುದೇ ಸ್ನಾತಕೋತ್ತರ ವಿಜ್ಞಾನ ಪದವಿಗಳಿಗೆ ಪ್ರವೇಶ ಪಡೆಯಲು ಇದು ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದೆ. ಸರಿ ಸುಮಾರು ಒಂದು ವರ್ಷಗಳಿಂದ ಜೈಲಿನಲ್ಲಿರುವ ಸೂರಜ್​ ತನ್ನ ಛಲವನ್ನು ಬಿಡದೇ ಜೈಲಾಧಿಕಾರಿಗಳು ಹಾಗೂ ವಿದ್ಯಾವಂತ ಕೈದಿಗಳ ಸಹಾಯದಿಂದ ತಮ್ಮ ಅಧ್ಯಯನವನ್ನು ಮುಂದುವರಿಸಿದರು.

ವಾರ್ಸಾಲಿಗಂಜ್​​ ಪೊಲೀಸ್​ ಠಾಣಾ ವ್ಯಾಪ್ತಿಯ ಮೊಸ್ಮಾ ಗ್ರಾಮದ ನಿವಾಸಿ ಸೂರಜ್​​ ಸೇರಿದಂತೆ ಇತರೆ 10 ಮಂದಿ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅವರ ಗ್ರಾಮದ ಒಳಚರಂಡಿ ವಿಚಾರದಲ್ಲಿ ಉಂಟಾದ ವಿವಾದದಲ್ಲಿ ಸಂಜಯ್​ ಯಾದವ್​ ಎಂಬವರು ಮೃತಪಟ್ಟಿದ್ದರು. ಇದಾದ ಬಳಿಕ ಮೃತರ ಪುತ್ರ ನೀಡಿದ ದೂರನ್ನು ಆಧರಿಸಿ ಸೂರಜ್​ರನ್ನು ಬಂಧಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...