
ಈ ವಿಡಿಯೋದಲ್ಲಿ ಮುದ್ದಾದ ಬೆಕ್ಕೊಂದು ತನ್ನಿಷ್ಟದ ಆಟಿಕೆ ಸಾಮಗ್ರಿಯನ್ನ ಎಲ್ಲಿ ಜೋಪಾನವಾಗಿ ಇಡೋದು ಎಂದು ಅರಿಯದೇ ಜಾಗವನ್ನ ಹುಡುಕುತ್ತಿರುವ ದೃಶ್ಯ ತುಂಬಾನೇ ಸೊಗಸಾಗಿದೆ.
ಸಕಲ ಸರ್ಕಾರಿ ಗೌರವದೊಂದಿಗೆ ಸಿ.ಎಂ. ಉದಾಸಿ ಅಂತ್ಯಕ್ರಿಯೆ
ಈ ವಿಡಿಯೋವನ್ನ ರೆಡಿಟ್ನಲ್ಲಿ ಶೇರ್ ಮಾಡಲಾಗಿದ್ದು 50 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಮಾಲೀಕನಿಂದ ಸಿಕ್ಕ ಈ ಉಡುಗೊರೆಯನ್ನ ಹಲ್ಲಿನಿಂದ ಕಚ್ಚಿ ಹಿಡಿದ ಬೆಕ್ಕು ಅದನ್ನ ಎಲ್ಲಿ ಇಡೋದು ಅಂತಾ ತಿಳಿಯದೇ ಸುತ್ತೆಲ್ಲ ಓಡಾಡಿದೆ. ಈ ವಿಡಿಯೋಗೆ ಬೆಕ್ಕಿನ ಮಾಲೀಕ, ನಾನು ಅಂಗಡಿಯಿಂದ ತಂದ ಡ್ರ್ಯಾಗನ್ ಗೊಂಬೆಯಿಂದಾಗಿ ನೋವಾ ಫುಲ್ ಖುಷಿಯಾಗಿದ್ದಾನೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.