alex Certify ಮನಮೆಚ್ಚಿದವಳನ್ನು ಆಕರ್ಷಿಸಲು ಫಸ್ಟ್‌ ಡೇಟ್‌ನಲ್ಲಿ ನೀವು ಮಾಡಬೇಕು ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಮೆಚ್ಚಿದವಳನ್ನು ಆಕರ್ಷಿಸಲು ಫಸ್ಟ್‌ ಡೇಟ್‌ನಲ್ಲಿ ನೀವು ಮಾಡಬೇಕು ಈ ಕೆಲಸ

ಯುವತಿಯರನ್ನು ಇಂಪ್ರೆಸ್‌ ಮಾಡೋದು ಸುಲಭದ ಕೆಲಸವಲ್ಲ. ದುಬಾರಿ ಉಡುಗೊರೆಗಳು, ಸರ್‌ಪ್ರೈಸ್‌, ಹೊಗಳಿಕೆ ಇವೆಲ್ಲವೂ ಹುಡುಗಿಯರಿಗೆ ಇಷ್ಟವಾಗುವಂತಹ ವಿಚಾರಗಳು. ಈ ವಿಷಯ ಸ್ವಲ್ಪ ಮಟ್ಟಿಗೆ ನಿಜವಾದರೂ ಅವರನ್ನು ಮೆಚ್ಚಿಸಲು ಇವಿಷ್ಟೇ ಸಾಕಾಗುವುದಿಲ್ಲ. ಯುವತಿಯರು ನಿಮ್ಮಿಂದ ಪ್ರಭಾವಿತರಾಗಬೇಕೆಂದು ನೀವು ಬಯಸಿದರೆ, ಖಂಡಿತವಾಗಿಯೂ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನೀವು ಮೊದಲ ಬಾರಿಗೆ ಹುಡುಗಿಯನ್ನು ಭೇಟಿಯಾದಾಗ ಭಯಪಡಬೇಡಿ. ಬದಲಿಗೆ ಪೂರ್ಣ ವಿಶ್ವಾಸದಿಂದ ಮಾತನಾಡಿ. ನೀವು ಚಾಟ್ ಮಾಡಲು ಹಿಂಜರಿಯುತ್ತಿದ್ದರೆ, ಆಕೆಗೆ ನಿಮ್ಮೊಂದಿಗೆ ಮಾತನಾಡಲು ಕಂಫರ್ಟ್‌ ಇರುವುದಿಲ್ಲ. ನಿಮ್ಮೊಂದಿಗೆ ತನ್ನ ಭವಿಷ್ಯವನ್ನು ಯೋಚಿಸಲು ಸಾಧ್ಯವಾಗುವುದಿಲ್ಲ. ಕೆಲವು ಹುಡುಗರು ಬಡಬಡನೇ ತಾವೇ ಮಾತನಾಡುತ್ತಾರೆ. ಇತರರ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ.

ಒಂದು ಹುಡುಗಿ ನಿಮ್ಮಿಂದ ಪ್ರಭಾವಿತಳಾಗಬೇಕೆಂದು ನೀವು ಬಯಸಿದರೆ, ಖಂಡಿತವಾಗಿಯೂ ಆಕೆಯ  ಮಾತುಗಳನ್ನು ಕೇಳಿ, ಅವಳಿಗೆ ಪೂರ್ಣ ಸಮಯವನ್ನು ನೀಡಿ. ಮಾತನ್ನು ಮಧ್ಯದಲ್ಲಿ ಕತ್ತರಿಸುವುದು ಸರಿಯಲ್ಲ. ಹುಡುಗಿಯರು ತುಂಬಾ ಭಾವನಾತ್ಮಕವಾಗಿರುತ್ತಾರೆ, ಆದ್ದರಿಂದ ಈ ಬಗ್ಗೆ ಕಾಳಜಿ ಇರಲಿ. ನೀವು ಯಾರನ್ನಾದ್ರೂ ಮೆಚ್ಚಿ ಅವಳನ್ನೇ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸಿದರೆ, ಅವರ ಕುಟುಂಬವನ್ನು ಗೌರವಿಸುವುದು ಮುಖ್ಯ.

ತಮ್ಮ ಕುಟುಂಬದ ಬಗ್ಗೆ ಕೆಟ್ಟದ್ದನ್ನು ಮಾತನಾಡಿದರೆ ಯಾವ ಯುವತಿಗೂ ಅದು ಇಷ್ಟವಾಗುವುದಿಲ್ಲ. ಹಾಗಾಗಿ ನಿಮಗೆ ಗೌರವ ಸಿಗಬೇಕೆಂದರೆ ನೀವು ಕೂಡ ಇತರರನ್ನು ಗೌರವಿಸಲು ಕಲಿಯಿರಿ. ಕಾಳಜಿಯುಳ್ಳ ಸ್ವಭಾವದ ಹುಡುಗರನ್ನು ಯುವತಿಯರು ತುಂಬಾ ಇಷ್ಟಪಡುತ್ತಾರೆ. ಪುರುಷರು ತಮ್ಮ ಸಂಗಾತಿಯ ಬಗ್ಗೆ ಸಣ್ಣ ಪುಟ್ಟ ವಿಷಯಗಳನ್ನೂ ತಿಳಿದುಕೊಂಡಿರಬೇಕು. ಅವರು ಇಷ್ಟಪಡುವ ಮತ್ತು ಇಷ್ಟಪಡದ ಸಂಗತಿಗಳ ಬಗ್ಗೆ ಕಾಳಜಿ ವಹಿಸಿ. ಕಾಲಕಾಲಕ್ಕೆ ಪ್ರಾಮಾಣಿಕ ಹೃದಯದಿಂದ ಅವರಿಗೆ ಸಹಾಯ ಮಾಡುತ್ತಿರಿ.

ಮೆಚ್ಚುಗೆ ಅಥವಾ ಪ್ರಶಂಸೆ ಎಲ್ಲರಿಗೂ ಇಷ್ಟವಾಗುವಂತಹ ವಿಚಾರ. ಅದರಲ್ಲೂ ಹುಡುಗಿಯರು ತಮ್ಮ ಬಗ್ಗೆ ಒಳ್ಳೆಯದನ್ನೇ ಕೇಳಲು ಇಷ್ಟಪಡುತ್ತಾರೆ. ನೀವು ಅವರ ಸೌಂದರ್ಯ, ನಗು, ಜ್ಞಾನ ಇವನ್ನೆಲ್ಲ ಹೊಗಳಿಬಿಡಿ. ಹಾಗಂತ ಹೊಗಳಿಕೆ ಕೃತಕವಾಗಿರಬಾರದು. ಏಕೆಂದರೆ ಹೊಗಳಿಕೆ ಎಷ್ಟು ನಿಜ ಮತ್ತು ಎಷ್ಟು ಸುಳ್ಳು ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅವರಲ್ಲೂ ಇರುತ್ತದೆ. ಈ ಅಂಶಗಳನ್ನೆಲ್ಲ ಗಮನದಲ್ಲಿಟ್ಟುಕೊಂಡರೆ ನಿಮ್ಮ ಮನಮೆಚ್ಚಿದವಳನ್ನೇ ಸಂಗಾತಿಯಾಗಿ ಪಡೆಯುವುದು ಸುಲಭವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...