alex Certify ಮಧ್ಯರಾತ್ರಿ 10 ಕಿಮೀ ಓಡ್ತಾನೆ ಈ ಯುವಕ: ಇದರ ಹಿಂದಿದೆ ಸ್ಫೂರ್ತಿದಾಯಕ ಕತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯರಾತ್ರಿ 10 ಕಿಮೀ ಓಡ್ತಾನೆ ಈ ಯುವಕ: ಇದರ ಹಿಂದಿದೆ ಸ್ಫೂರ್ತಿದಾಯಕ ಕತೆ..!

ಯುವಕನೊಬ್ಬ ಮಧ್ಯರಾತ್ರಿ ವೇಳೆಯಲ್ಲಿ ನೋಯ್ಡಾ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಓಡುತ್ತಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೇ ವೀವ್ಸ್​ ಸಂಪಾದಿಸಿದೆ. ನಿರ್ಮಾಪಕ ಹಾಗೂ ಲೇಖಕ ವಿನೋದ್​ ಕಪ್ರಿ ಈ ವಿಡಿಯೋವನ್ನು ಚಿತ್ರೀಕರಿಸಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಯುವಕ ಈ ರೀತಿ ರಸ್ತೆಯಲ್ಲಿ ಓಡುವ ಹಿಂದಿನ ಕಾರಣ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. 19 ವರ್ಷದ ಪ್ರದೀಪ್​ ಮೆಹ್ರಾ ಮುಂದೆ ಸೇನೆಯನ್ನು ಸೇರಬೇಕೆಂಬ ಕಾರಣದಿಂದ ಪ್ರತಿನಿತ್ಯ ತಾನು 10 ಕಿಮೀ ಓಡಿಕೊಂಡೇ ಕೆಲಸದ ಸ್ಥಳದಿಂದ ಮನೆಗೆ ಸಾಗುತ್ತೇನೆ ಎಂದು ಹೇಳಿದ್ದಾರೆ.

ವಿನೋದ್​ ಕಪ್ರಿ ಡ್ರಾಪ್​ ನೀಡುತ್ತೇನೆ ಎಂದರೂ ಸಹ ನಿರಾಕರಿಸಿದ ಯುವಕ ನಿಮ್ಮ ಬಳಿ ಡ್ರಾಪ್​ ತೆಗೆದುಕೊಂಡರೆ ನನ್ನ ಅಭ್ಯಾಸ ತಪ್ಪುತ್ತದೆ ಎಂದು ಹೇಳಿದ್ದಾನೆ. ಅಲ್ಲದೇ ಊಟ ಮಾಡಲೂ ಇಲ್ಲ ಎಂದ ಯುವಕ ನಾನು ಮನೆಗೆ ಹೋಗಿ ಅಡುಗೆ ಮಾಡಿ ಅಣ್ಣನಿಗೆ ಊಟ ಬಡಿಸಬೇಕು. ನಾನು ನಿಮ್ಮ ಜೊತೆ ಊಟ ಮಾಡಿದರೆ ಅಣ್ಣ ಉಪವಾಸ ಇರಬೇಕಾಗುತ್ತದೆ ಎಂದು ಹೇಳಿದ್ದಾನೆ.

ಈ ವಿಡಿಯೋ ವೈರಲ್​ ಆದರೆ ಏನು ಮಾಡುತ್ತಿ ಎಂಬ ಕಪ್ರಿ ಪ್ರಶ್ನೆಗೂ ಬಹಳ ಸೌಮ್ಯವಾಗೇ ಉತ್ತರಿಸಿದ ಯುವಕ, ನಾನೇನು ತಪ್ಪು ಕೆಲಸ ಮಾಡುತ್ತಿಲ್ಲ ಎಂದಮೇಲೆ ಚಿಂತೆ ಏಕೆ ಎಂದು ಹೇಳಿದ್ದಾನೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಸಂಪಾದಿಸಿದೆ.

— Vinod Kapri (@vinodkapri) March 20, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...