alex Certify ಮಧುಮೇಹಿಗಳಿಗೆ ರಾಮಬಾಣ ಈ ಕಷಾಯ ಕುಡಿದರೆ ಸಾಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಮೇಹಿಗಳಿಗೆ ರಾಮಬಾಣ ಈ ಕಷಾಯ ಕುಡಿದರೆ ಸಾಕು…!

ಪ್ರತಿ ಮನೆಯಲ್ಲೂ ದಾಲ್ಚಿನ್ನಿ ಬಳಸ್ತಾರೆ. ದಾಲ್ಚಿನ್ನಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮಗೆ ಹಲವಾರು ಪೋಷಕಾಂಶಗಳನ್ನು ನೀಡುತ್ತದೆ. ದಾಲ್ಚಿನಿಯಿಂದ ತಯಾರಿಸಿದ ಕಷಾಯ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಾಲ್ಚಿನ್ನಿ ಕಷಾಯ ರಾಮಬಾಣ. ಇದು ದೇಹದಲ್ಲಿರುವ ಎಲ್ಲಾ ವಿಷವನ್ನು ಹೊರಹಾಕುತ್ತದೆ. ದಾಲ್ಚಿನ್ನಿ ಕಷಾಯ ದೇಹದಲ್ಲಿ ಬೆಳೆಯುತ್ತಿರುವ ಅನಗತ್ಯ ಕೊಬ್ಬನ್ನು ಸಹ ಸುಡುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರಮಾಡುತ್ತದೆ.

ದಾಲ್ಚಿನ್ನಿಯಲ್ಲಿರುವ ಔಷಧೀಯ ಗುಣಗಳು ಮಧುಮೇಹವನ್ನು ಗುಣಪಡಿಸುತ್ತವೆ. ಇದರಲ್ಲಿರುವ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮಧುಮೇಹಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ.

ದಾಲ್ಚಿನ್ನಿ ಕಷಾಯ ತಯಾರಿಸುವುದು ಹೇಗೆ?

ದಾಲ್ಚಿನ್ನಿ ಕಷಾಯ ಮಾಡಲು ಒಂದು ಪಾತ್ರೆಯಲ್ಲಿ 1 ಲೀಟರ್ ನೀರನ್ನು ಹಾಕಿ ಮತ್ತು ಅದರಲ್ಲಿ 1 ಇಂಚು ಉದ್ದದ ದಾಲ್ಚಿನ್ನಿ ತುಂಡನ್ನು ಸೇರಿಸಿ. ಈಗ ರಾತ್ರಿಯಿಡೀ ಅದನ್ನು ಹಾಗೇ ಬಿಡಿ. ಜೊತೆಗೆ ಕೆಲವು ನಿಂಬೆ ಹಣ್ಣಿನ ತುಂಡುಗಳನ್ನು ಕೂಡ ಹಾಕಬಹುದು. ಮರುದಿನ ನಿಮಗೆ ಬಾಯಾರಿಕೆಯಾದಾಗ ಈ ನೀರನ್ನು ಕುಡಿಯಿರಿ. ಅಥವಾ ದಾಲ್ಚಿನ್ನಿಯನ್ನು ನೀರಿನಲ್ಲಿ ಕುದಿಸಿ ಕೂಡ ಸೇವಿಸಬಹುದು. ಎರಡು ಲೋಟ ನೀರಿಗೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಕುದಿಸಿಕೊಂಡು ಪ್ರತಿದಿನ ಕುಡಿಯಬಹುದು. ನಿಯಮಿತವಾಗಿ ಇದನ್ನು ಸೇವಿಸುತ್ತ ಬಂದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...