ಒಮ್ಮೆ ಶುಗರ್ ಬಂತೆಂದರೆ ಅವರು ತಮ್ಮ ಬಾಯಿಗೆ ಬೇಕೆನಿಸಿದ್ದನ್ನು ತಿನ್ನುವ ಹಾಗೇ ಇಲ್ಲ. ಎಲ್ಲದಕ್ಕೂ ನಿಯಂತ್ರಣ ಹೇರಬೇಕು.
ಸಿಹಿ ತಿನಿಸುಗಳು, ಕೆಲವು ಹಣ್ಣುಗಳನ್ನು ಮುಟ್ಟುವ ಹಾಗೇ ಇಲ್ಲ. ಹಾಗಿದ್ದರೆ ಮಧುಮೇಹದವರು ಯಾವೆಲ್ಲಾ ಆಹಾರವನ್ನು ತಿನ್ನಬಹುದು ಎಂಬುದರ ಕುರಿತು ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.
ಕೊಬ್ಬಿನಾಂಶ ಹೆಚ್ಚಿರದ ಹಾಲು ಹಾಗೂ ಮೊಸರನ್ನು ಮಧುಮೇಹದವರು ಸೇವಿಸಬಹುದು. ಇದು ವಿಟಮಿನ್ ಡಿ ಯನ್ನು ದೇಹಕ್ಕೆ ನೀಡುತ್ತದೆ.
ಇನ್ನು ಮಧುಮೇಹದವರು ಟೊಮೆಟೊ ಹಣ್ಣನ್ನು ಸೇವಿಸಬಹುದು. ಇದರಲ್ಲಿ ವಿಟಮಿನ್ಸ್, ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್ಸ್ ಇರುತ್ತದೆ. ಇದನ್ನು ಸೇವಿಸುವುದರಿಂದ ಯಾವುದೇ ಸಮಸ್ಯೆ ಆಗಲ್ಲ.
ಸೇಬು ಹಣ್ಣನ್ನು ಕೂಡ ಸೇವಿಸಬಹುದು. ಇದನ್ನು ದಿನನಿತ್ಯ ತಿನ್ನಬಹುದು. ಇದರಲ್ಲಿ ಡೈಯೆಟ್ರಿ ಫೈಬರ್, ವಿಟಮಿನ್ಸ್ ಇದೆ. ಜೀರ್ಣಕ್ರೀಯೆಗೆ ಸಹಾಯಕಾರಿಯಾಗಿದೆ.
ಬ್ಲೂ ಬೆರ್ರಿಸ್, ಬ್ಲ್ಯಾಕ್ ಬೆರ್ರಿಸ್, ಸ್ಟ್ರಾಬೆರ್ರಿಸ್ ಹಣ್ಣನ್ನು ಕೂಡ ಮಧುಮೇಹದವರು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹೆಚ್ಚಿನ ನಾರಿನಾಂಶವಿರುವ ಓಟ್ಸ್ ಕೂಡ ಮಧುಮೇಹದವರಿಗೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಪದೇ ಪದೇ ಹಸಿವಾಗುವುದಿಲ್ಲ. ಬ್ಲಡ್ ಶುಗರ್ ಲೆವಲ್ ಅನ್ನು ಕೂಡ ನಿಯಂತ್ರಣದಲ್ಲಿಡುತ್ತದೆ.
ಮೀನಿನಲ್ಲಿ ಓಮೇಗಾ-3 ಫ್ಯಾಟಿ ಆ್ಯಸಿಡ್ ಇದೆ. ಇದನ್ನು ಕೂಡ ಮಧುಮೇಹದವರು ಸೇವಿಸಬಹುದು. ಆರೋಗ್ಯಕರವಾದ ಹೃದಯಕ್ಕೆ ಮೀನು ಉತ್ತಮವಾದ ಆಹಾರವಾಗಿದೆ.