alex Certify ಮದ್ಯ ಸೇವಿಸಿ ವಿಮಾನ ಹಾರಿಸಲು ಹೊರಟಿದ್ದ ಪೈಲಟ್​ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಸೇವಿಸಿ ವಿಮಾನ ಹಾರಿಸಲು ಹೊರಟಿದ್ದ ಪೈಲಟ್​ ಅರೆಸ್ಟ್

ಪೈಲಟ್​ಗಳಿಗೆ ನಿಗದಿ ಮಾಡಲಾದ ಮಿತಿಗಿಂತ ನಾಲ್ಕು ಪಟ್ಟು ಹೆಚ್ಚು ಆಲ್ಕೋಹಾಲ್​ ಅಂಶ ಪೈಲಟ್​ನ ರಕ್ತದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೈಲಟ್​ನ್ನು ವಿಮಾನದ ಕಾಕ್​ಪಿಟ್​ನಿಂದ ಕೆಳಗಿಳಿಸಲಾಗಿದೆ. ಜೆಟ್​ ಬ್ಲೂನ ಸಿಬ್ಬಂದಿಯಾದ 52 ವರ್ಷದ ಪೈಲಟ್​ ಜೇಮ್ಸ್​ ಕ್ಲಿಫ್ಟನ್​ರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.‌

ಫ್ಲೋರಿಡಾದ ಓರ್ಲ್ಯಾಂಡೋದ ಪೈಲಟ್​ ಈ ರೀತಿಯಲ್ಲಿ ಭದ್ರತಾ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದು ಬಂದ ಬಳಿಕ ಅವರನ್ನು ಕಾಕ್​ಪಿಟ್​ನಿಂದ ತೆಗೆದು ಹಾಕಲಾಗಿದೆ ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ.

ಬಫಲೋ ನಯಾಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೋರ್ಟ್ ಲಾಡರ್​ಡೇಲ್​ಗೆ ವಿಮಾನವು ಹೊರಡುವ ಮುನ್ನ ತಾನು ಏಳರಿಂದ ಎಂಟು ಬಾರಿ ಮದ್ಯಪಾನ ಮಾಡಿದ್ದಾಗಿ ಪೈಲಟ್​ ಕ್ಲಿಫ್ಟಿನ್​​ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಅವರನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...