ಬಿಹಾರದಲ್ಲಿ ಮದ್ಯ ನಿಷೇಧವಾದ ನಂತರ ಅಪರಾಧ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳುತ್ತಿದ್ದ ಅಲ್ಲಿನ ಸಿಎಂ ನಿತೀಶ್ ಕುಮಾರ್, ಈಗ ಮದ್ಯ ಬೇಕು ಎನ್ನುವವರು ನಮ್ಮ ರಾಜ್ಯಕ್ಕೆ ಬರಲೇಬೇಡಿ ಎಂದು ಹೇಳಿದ್ದಾರೆ.
ಬೇರೆ ರಾಜ್ಯಗಳಿಂದ ಬಿಹಾರಕ್ಕೆ ಬರುವ ಹಲವು ಪ್ರವಾಸಿಗರು ಮದ್ಯದ ಬೇಡಿಕೆ ಇಡುತ್ತಿದ್ದಾರೆ. ಆದರೆ, ಅವರಿಗಾಗಿ ಮದ್ಯಕ್ಕೆ ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ ಎಷ್ಟೇ ಪ್ರಜ್ಞಾವಂತರು ಇದ್ದರೂ ಮದ್ಯ ಸೇವಿಸಬೇಕೆಂದರೆ ನಮ್ಮ ರಾಜ್ಯಕ್ಕೆ ಬರುವುದು ಬೇಡ. ನಿಮ್ಮಂತಹ ವ್ಯಕ್ತಿಗಳು ನಮ್ಮ ರಾಜ್ಯಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
14 ತಿಂಗಳುಗಳ ನಂತರ ಪಾಲಕನೊಂದಿಗೆ ಆನೆಗಳ ಪುರ್ನರ್ಮಿಲನ: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು
ಈಗಾಗಲೇ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲಾಗಿದ್ದು, ಈ ಕಾನೂನನ್ನು ಸಡಿಲಗೊಳಿಸುವ ಮಾತೇ ಇಲ್ಲ. ಮದ್ಯ ಸೇವಿಸಬೇಕು ಎಂದು ಹಠ ಹಿಡಿಯುವವರು ಸಮಾಜ ವಿರೋಧಿಗಳು. ಅಷ್ಟೇ ಅಲ್ಲದೇ ಅವರು ಮಹಾತ್ಮ ಗಾಂಧಿ ಸಿದ್ಧಾಂತದ ವಿರೋಧಿಗಳಿದ್ದಂತೆ ಎಂದು ಹೇಳಿದ್ದಾರೆ.
ಬೇರೆಯವರಿಗಾಗಿ ನಾವು ರಾಜ್ಯದಲ್ಲಿ ಕಾನೂನು ಸಡಿಲಗೊಳಿಸುವಂತಹ ಕಾರ್ಯಕ್ಕೆ ಕೈ ಹಾಕುವುದಿಲ್ಲ. ಹೀಗಾಗಿ ಈ ರಾಜ್ಯಕ್ಕೆ ಮದ್ಯ ಸೇವನೆ ಮಾಡುವವರೂ ಬರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.