alex Certify ಮದ್ಯದಂಗಡಿಯಲ್ಲಿ ನೂಕಿದ ಕಾರಣಕ್ಕೆ ಯುವಕನನ್ನೇ ಕೊಲೆಗೈದ ಪಾಪಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿಯಲ್ಲಿ ನೂಕಿದ ಕಾರಣಕ್ಕೆ ಯುವಕನನ್ನೇ ಕೊಲೆಗೈದ ಪಾಪಿ….!

ಮದ್ಯದ ಅಂಗಡಿಯಿಂದ ಹೊರಬರುತ್ತಿದ್ದ ವೇಳೆಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ನೂಕಿದ ಕಾರಣಕ್ಕೆ 23 ವರ್ಷದ ಯುವಕನನ್ನು ಕೊಲೆಗೈದ ಘಟನೆಯೊಂದು ಕುರ್ಲಾ ಮದ್ಯದಂಗಡಿಯಲ್ಲಿ ನಡೆದಿದೆ. ಮುಂಬೈನ ಎಸ್​ ಬಿ ಬರ್ವೇ ರಸ್ತೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಯಾದ ರಾಜೇಶ್​ ಭಲೋಟಿಯಾ ಮದ್ಯದ ಅಂಗಡಿಯಿಂದ ಹೊರಬರುತ್ತಿದ್ದ ವೇಳೆಯಲ್ಲಿ ಆರೋಪಿ ರಾಜೇಶ್​ ವಾಗ್ಮೆರೆಯನ್ನು ನೂಕಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಆರೋಪಿ ರಾಜೇಶ್​​ ವಾಗ್ಮೆರೆಯು ರಾಜೇಶ್ ಭಲೋಟಿಯಾನ ತಲೆಯನ್ನು ರಸ್ತೆಗೆ ಜಬ್ಬಿ ಕೊಲೆಗೈದಿದ್ದಾನೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ರು.

ರಕ್ತದ ಮಡುವಿನಲ್ಲಿ ಬಿದಿದ್ದ ರಾಜೇಶ್​ ಭಲೋಟಿಯಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆರೋಪಿ ರಾಜೇಶ್​ ವಾಗ್ಮೆರೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...