alex Certify ಮದುವೆ ಸಮಾರಂಭದಲ್ಲಿ ವಧುವಿನ ಪಾದ ಮುಟ್ಟಿ ನಮಸ್ಕರಿಸಿದ ವರ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭದಲ್ಲಿ ವಧುವಿನ ಪಾದ ಮುಟ್ಟಿ ನಮಸ್ಕರಿಸಿದ ವರ: ವಿಡಿಯೋ ವೈರಲ್

ದೇಸಿ ವಿವಾಹ ಸಮಾರಂಭ ಅಂದ್ರೆ ಅಲ್ಲಿ ಸಂಪ್ರದಾಯ, ಹಾಡು, ನೃತ್ಯ, ತಮಾಷೆ, ಮೋಜು-ಮಸ್ತಿ ಎಲ್ಲಾ ಕಾಮನ್. ಆದರೆ, ಇದೀಗ ವೈರಲ್ ಆಗಿರೋ ವಿಡಿಯೋವನ್ನು ಮಾತ್ರ ಬಹುಶಃ ಈ ಹಿಂದೆ ನೀವು ನೋಡಿರಲಿಕೆ ಸಾಧ್ಯವೇ ಇಲ್ಲ. ವಿವಾಹ ಸಮಾರಂಭದಲ್ಲಿ ವಧು-ವರ ಪ್ರತಿಜ್ಞೆ ಮಾಡುತ್ತಿರುವ ವಿಡಿಯೋ ಇದಾಗಿದೆ. ವರನ ಹಾವಭಾವವು ವಧುವನ್ನು ಆಶ್ಚರ್ಯಗೊಳಿಸಿದೆ. ಅಷ್ಟಕ್ಕೂ ವಿಡಿಯೋದ ವಿಶೇಷತೆ ಏನು ಅಂತಾ ಕೇಳ್ತಾ ಇದ್ದೀರಾ..? ಮುಂದೆ ಓದಿ.

ವಿಡಿಯೋದಲ್ಲಿರುವ ವಧುವನ್ನು ದಿತಿ ಗೊರಾಡಿಯಾ ಎಂದು ಗುರುತಿಸಲಾಗಿದ್ದು, ವರ ಅರ್ನವ್ ರಾಯ್. ಇವರಿಬ್ಬರು ಇತ್ತೀಚೆಗಷ್ಟೇ ವಿವಾಹವಾಗಿದ್ದು, ಅವರ ವಿವಾಹದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ವಧು ವರನ ಪಾದ ಮುಟ್ಟಿ ನಮಸ್ಕರಿಸೋದು ಸಂಪ್ರದಾಯವಾಗಿದೆ. ಆದರೆ, ಇಲ್ಲಿ ವರ, ವಧುವಿನ ಪಾದ ಸ್ಪರ್ಶಿಸಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ದಿತಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು 6 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.

ಇಂಟರ್ನೆಟ್ ಈ ವಿಡಿಯೋವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದೆ. ಹೆಣ್ಣು-ಗಂಡು ಇಬ್ಬರೂ ಕೂಡ ಸಮಾನರು. ಸಮಾನತೆ ಅಂದ್ರೆ ಇದೆ ಅಲ್ಲವೇ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ವಧುವಿಗೆ, ನೀವು ರತ್ನವನ್ನು ಕಂಡುಕೊಂಡಿದ್ದೀರಿ ಅಂತಾ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...