ಮದುವೆ ದಿನ ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸ್ತಾರೆ. ಸುಂದರವಾಗಿ ಕಾಣಲು ಬಟ್ಟೆಯೊಂದೇ ಅಲ್ಲ ಚರ್ಮದ ಹೊಳಪೂ ಮಹತ್ವ ಪಡೆಯುತ್ತದೆ. ಇದು ತಿಳಿದಿರುವವರು ಮದುವೆಗೆ 5-10 ದಿನ ಬಾಕಿ ಇರುವಾಗ ಸೌಂದರ್ಯವರ್ಧನೆಗೆ ಕಸರತ್ತು ಶುರು ಮಾಡ್ತಾರೆ.
ಆದ್ರೆ ಇದ್ರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಮದುವೆಗೆ ಒಂದು ತಿಂಗಳಿರುವಾಗ ಚರ್ಮದ ಆರೈಕೆ ಶುರುಮಾಡಿದ್ರೆ ಫಲ ಸಿಗೋದ್ರಲ್ಲಿ ಅನುಮಾನವಿಲ್ಲ.
ಮದುವೆಗೆ ಒಂದು ತಿಂಗಳಿರುವಾಗ ಚರ್ಮದ ಆರೈಕೆ ಶುರು ಮಾಡಿ. ಚರ್ಮಕ್ಕನುಗುಣವಾಗಿ ಕ್ಲೀನರ್, ಟೋನರ್, ಮಾಯಿಶ್ಚರೈಸಜ್ ಬಳಸಿ.
ಚರ್ಮವನ್ನು ಆಳದಿಂದ ಸ್ವಚ್ಛಗೊಳಿಸಲು ವಾಲ್ನಟ್ ಪೀಲ್ ಸ್ಕ್ರಬ್, ರಾ ಹಾಲು ಅಥವಾ ಅಲ್ಮಂಡ್ ಪೌಡರ್ ಸ್ಕ್ರಬ್ ಬಳಸಿ.
ಮದುವೆಗೆ ಮೂರ್ನಾಲ್ಕು ದಿನವಿರುವಾಗ ಹೊಸ ಹೊಸ ಪ್ರಯೋಗ ಮಾಡಿದಲ್ಲಿ ಚರ್ಮಕ್ಕೆ ಹಾನಿಯುಂಟಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ತಿಂಗಳು ಮೊದಲೇ ಮನೆ ಮದ್ದು ಶುರು ಮಾಡಿದ್ರೆ ಯಾವುದು ಚರ್ಮಕ್ಕೆ ಅಲರ್ಜಿ ಎಂಬುದು ಮೊದಲೇ ತಿಳಿಯುತ್ತದೆ.