
ಅಂಕುರ್ ಬಾಲ್ಯನ್ರ ಮದುವೆ ಮತದಾನದ ದಿನವೇ ನಿಗದಿಯಾಗಿತ್ತು. ಆದರೆ ಮದುವೆ ಕಾರ್ಯಕ್ರಮಕ್ಕೆಂದು ಮತದಾನವನ್ನು ತಪ್ಪಿಸಬಾರದೆಂದು ವರ ಅಂಕುರ್ ಮೊದಲು ಮತಗಟ್ಟೆಗೆ ತೆರಳಿ ಮತವನ್ನು ಚಲಾಯಿಸಿ ಬಳಿಕ ಕಲ್ಯಾಣ ಮಂಟಪಕ್ಕೆ ತೆರಳಿದ್ದಾರೆ.
ಇನ್ನು ಮತಗಟ್ಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ವರ ಅಂಕುರ್ ಬಾಲ್ಯನ್, ಮೊದಲು ಮತದಾನ, ಬಳಿಕ ಪತ್ನಿ, ಇದಾದ ಬಳಿಕ ಮಿಕ್ಕ ಕೆಲಸ ಎಂದು ಮಾಧ್ಯಮಗಳ ಎದುರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮೊದಲ ಹಂತದ ಮತದಾನ ಆರಂಭಗೊಂಡಿದೆ. ಇದು ಸಂಜೆ 6 ಗಂಟೆಯವರೆಗೂ ನಡೆಯಲಿದೆ. ಚುನಾವಣಾ ಆಯೋಗವು ನೀಡಿರುವ ಮಾಹಿತಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆವರೆಗೆ 20.3 ಪ್ರತಿಶತ ಮತದಾನವಾಗಿತ್ತು.