ಗ್ಲೆನ್ ಮ್ಯಾಕ್ಸ್ವೆಲ್ ಮುಂದಿನ ತಿಂಗಳು ಮೆಲ್ಬೋರ್ನ್ನಲ್ಲಿ ತಮ್ಮ ಭಾರತೀಯ ಮೂಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾದ ಆಲ್ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಮದುವೆ ಕಾರ್ಯಕ್ಕೆಂದು ಮುಂದಿನ ತಿಂಗಳು ಕ್ರಿಕೆಟ್ಗೆ ಗೈರಾಗಲಿದ್ದಾರೆ.
ಗ್ಲೆನ್ ಮ್ಯಾಕ್ಸ್ವೆಲ್ ಮದುವೆ ಆಮಂತ್ರಣ ಪತ್ರಿಕೆಯು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆದ ಬಳಿಕ ಭಾರತೀಯ ನೆಟ್ಟಿಗರು ಮ್ಯಾಕ್ಸ್ವೆಲ್ ಮದುವೆಯತ್ತ ಹೆಚ್ಚು ಆಸಕ್ತಿಯನ್ನು ತೋರಿಸುವಂತಾಯ್ತು. ಏಕೆಂದರೆ ಮದುವೆ ಕಾರ್ಡ್ನ್ನು ತಮಿಳು ಭಾಷೆಯಲ್ಲಿ ಮುದ್ರಿಸಲಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಆಮಂತ್ರಣ ಪತ್ರಿಕೆ ಲೀಕ್ ಆಗಿದ್ದು ಮ್ಯಾಕ್ಸ್ವೆಲ್ ಮನಸ್ಸಿಗೆ ತುಂಬಾನೆ ಘಾಸಿ ಮಾಡಿದೆ ಎನ್ನಲಾಗಿದೆ. ಇಂತಹ ಪ್ರಮಾದ ಇನ್ಯಾವ ವಿಚಾರದಲ್ಲಿಯೂ ಸಂಭವಿಸಬಾರದು ಎಂಬ ಕಾರಣಕ್ಕೆ ತಮ್ಮ ಮದುವೆಗೆ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಮ್ಯಾಕ್ಸ್ವೆಲ್ ಇದೊಂದು ಖಾಸಗಿ ಕಾರ್ಯಕ್ರಮವಾಗಬೇಕಿತ್ತು. ಆದರೆ ಇದೀಗ ಆಮಂತ್ರಣ ಪತ್ರಿಕೆ ಲೀಕ್ ಆಗಿದೆ. ಸ್ವಲ್ಪ ಹೆಚ್ಚು ಉತ್ಸಾಹ ತೋರಿಸಿದ ಭಾರತೀಯ ಸಂಬಂಧಿಗಳು ಅವರ ಸ್ನೇಹಿತರಿಗೆ ಮದುವೆ ಕಾರ್ಡ್ ತೋರಿಸಲು ನಿರ್ಧರಿಸಿದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ನಮಗೆ ಇದು ನಿಜಕ್ಕೂ ಆಘಾತ ತಂದಿತ್ತು. ನಾವೀಗ ಮದುವೆಗೆ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಮ್ಯಾಕ್ಸ್ವೆಲ್ ಹಾಗೂ ವಿನಿ 2020ರ ಮಾರ್ಚ್ ತಿಂಗಳಲ್ಲಿ ಎಂಗೇಜ್ ಆಗಿದ್ದರು. ನಿಶ್ಚಿತಾರ್ಥಕ್ಕೂ ಮುನ್ನ ಕೆಲವು ಸಮಯಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿತ್ತು.