
ರಾಜಸ್ಥಾದನ ಜೋಧ್ಪುರದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯ ಕುಯಿಜೋಡಾ ಗ್ರಾಮದಲ್ಲಿ ವಧು ರೇಖಾ ಜೊತೆ ವರ ಸುಭಾಷ್ ಮೆರವಣಿಗೆಯಲ್ಲಿ ಬಂದಿದ್ದಾರೆ. ವಧು ಸಹ ಖುಷಿ ಖುಷಿಯಾಗಿ ಮದುವೆಯಲ್ಲಿ ಪಾಲ್ಗೊಂಡಿದ್ದಾಳೆ. ಅಲ್ಲದೇ ವಧು – ವರರಿಬ್ಬರು ಸಪ್ತಪದಿಯನ್ನು ತುಳಿದಿದ್ದಾರೆ.
ಆದರೆ ಇದಾದ 10 ಗಂಟೆ ಬಳಿಕ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಇದರಿಂದ ಮದುವೆಗೆ ಆಗಮಿಸಿದ್ದ ವಧು – ವರನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಬಳಿಕ ತಿಳಿದುಬಂದ ಅಂಶವೆಂದರೆ ಮದುವೆ ಸಂಭ್ರಮದಲ್ಲಿ ತೀವ್ರವಾಗಿ ದಣಿದಿದ್ದ ವಧು ರೇಖಾ ಬಿಸಿಲಿನ ಧಗೆಯಿಂದ ಬಸವಳಿದು ಹೋಗಿದ್ದಳು ಎನ್ನಲಾಗಿದೆ.
ಈ ಎಲ್ಲ ಕಾರಣದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆಕೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ. ಇದರಿಂದ ಸಂಭ್ರಮ ಮನೆ ಮಾಡಬೇಕಿದ್ದ ಮದುವೆ ಮನೆಯಲ್ಲಿ ಈಗ ಶೋಕ ಆವರಿಸಿದೆ. ತೀವ್ರ ದುಃಖತಪ್ತರಾಗಿರುವ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದಾರೆ.