alex Certify ಮತ್ತೊಂದು ಮನೆಗೆ ಶಿಫ್ಟಾಗ್ತಿದ್ದಾರೆ ವಿರಾಟ್‌ – ಅನುಷ್ಕಾ ಜೋಡಿ : ತಿಂಗಳ ಬಾಡಿಗೆ ಮೊತ್ತ ಕೇಳಿ ದಂಗಾಗಿದ್ದಾರೆ ಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಮನೆಗೆ ಶಿಫ್ಟಾಗ್ತಿದ್ದಾರೆ ವಿರಾಟ್‌ – ಅನುಷ್ಕಾ ಜೋಡಿ : ತಿಂಗಳ ಬಾಡಿಗೆ ಮೊತ್ತ ಕೇಳಿ ದಂಗಾಗಿದ್ದಾರೆ ಜನ….!

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಇತ್ತೀಚೆಗೆ ಮುಂಬೈನಲ್ಲಿ ಹೊಸ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಜೊತೆಗೆ ಸ್ಟಾರ್‌ ದಂಪತಿ ಹೊಸ ವಿಲ್ಲಾವನ್ನೂ ಖರೀದಿಸಿದ್ದಾರೆ. ಸದ್ಯದಲ್ಲೇ ಬಾಡಿಗೆ ಮನೆಗೆ ಶಿಫ್ಟ್ ಆಗಲು ಮುಂದಾಗಿದ್ದಾರೆ. ಈ ಮನೆಗೆ ಪ್ರತಿ ತಿಂಗಳು ಇವರು ಕಟ್ಟಬೇಕಾದ ಬಾಡಿಗೆ ಮೊತ್ತ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.

ಅನುಷ್ಕಾ ಮತ್ತು ವಿರಾಟ್‌ ಬಾಡಿಗೆಗೆ ತೆಗೆದುಕೊಂಡಿರುವ ಮನೆ ಮುಂಬೈನ ಜುಹುವಿನಲ್ಲಿದೆ. 1,650 ಚದರ ಅಡಿಯ ಫ್ಲಾಟ್ ಇದು. ಈಗಾಗ್ಲೇ 7.50 ಲಕ್ಷ ರೂಪಾಯಿ ಮುಂಗಡ ಹಣವನ್ನೂ ಕಟ್ಟಿಬಿಟ್ಟಿದ್ದಾರೆ. ಕೆಲ ಸಮಯದ ಹಿಂದಷ್ಟೆ ಮನೆಯ ಅಗ್ರಿಮೆಂಟ್‌ ಮಾಡಿಕೊಂಡಿದ್ದಾರಂತೆ. ಈ ಮನೆಗೆ ತಿಂಗಳ ಬಾಡಿಗೆ ಬರೋಬ್ಬರಿ 2.76 ಲಕ್ಷ ರೂಪಾಯಿ.

ಇದು ಸೀ ಫೇಸಿಂಗ್‌ ಫ್ಲಾಟ್‌ ಅನ್ನೋದು ವಿಶೇಷತೆ. ಅನುಷ್ಕಾ-ವಿರಾಟ್ ಬಾಡಿಗೆಗೆ ಪಡೆದಿರುವ ಮನೆ ಮಾಜಿ ಕ್ರಿಕೆಟಿಗ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರದ್ದು ಎನ್ನಲಾಗ್ತಿದೆ. ದಂಪತಿ ಅಲಿಬಾಗ್‌ನ ಹಳ್ಳಿಯೊಂದರಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿದ್ದಾರಂತೆ. 4BHK ಐಷಾರಾಮಿ ವಿಲ್ಲಾವನ್ನು 13 ಕೋಟಿಗೆ ಕೊಂಡುಕೊಂಡಿದ್ದಾರೆ ಎನ್ನಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...