alex Certify ಮತ್ತೊಂದು ದಾಖಲೆಗೆ ಪಾತ್ರರಾದ ವಿರಾಟ್; ಟ್ವಿಟ್ಟರ್ ನಲ್ಲಿ ಕೊಹ್ಲಿಗೀಗ 5 ಕೋಟಿ ‘ಫಾಲೋವರ್ಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ದಾಖಲೆಗೆ ಪಾತ್ರರಾದ ವಿರಾಟ್; ಟ್ವಿಟ್ಟರ್ ನಲ್ಲಿ ಕೊಹ್ಲಿಗೀಗ 5 ಕೋಟಿ ‘ಫಾಲೋವರ್ಸ್’

ಸತತ ಬ್ಯಾಟಿಂಗ್ ವೈಫಲ್ಯದಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಇತ್ತೀಚೆಗೆ ನಡೆದ ಟಿ20 ಏಷ್ಯಾ ಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಫಾರ್ಮ್ ಕಂಡುಕೊಂಡಿದ್ದರು. ಇದರಿಂದ ಸಂತಸಗೊಂಡಿದ್ದ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಇಲ್ಲಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಈಗ 5 ಕೋಟಿ ಫಾಲೋವರ್ಸ್ ಗಳಿದ್ದು ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನುಳಿದಂತೆ ಕೊಹ್ಲಿಯವರಿಗೆ ಇನ್ಸ್ಟಾಗ್ರಾಮ್ ನಲ್ಲಿ 21.1 ಕೋಟಿ ಹಾಗೂ ಫೇಸ್ಬುಕ್ ನಲ್ಲಿ 4.9 ಕೋಟಿ ಮಂದಿ ಫಾಲೋವರ್ಸ್ ಗಳಿದ್ದು, ಒಟ್ಟಾರೆ ಸಾಮಾಜಿಕ ಜಾಲತಾಣಗಳಲ್ಲಿ 31 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದಂತಾಗಿದೆ.

ಟ್ವಿಟರ್ ನಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ 3.7 ಕೋಟಿ ಫಾಲೋವರ್ಸ್ ಗಳಿದ್ದರೆ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ 2.09 ಕೋಟಿ, ಮಾಜಿ ನಾಯಕ ಎಂ.ಎಸ್. ಧೋನಿಯವರಿಗೆ 80.4 ಲಕ್ಷ, ಹಾರ್ದಿಕ್ ಪಾಂಡ್ಯಗೆ 70 ಲಕ್ಷ ಹಾಗೂ ಯುವರಾಜ್ ಸಿಂಗ್ 54 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...