ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ರ ಅಳಿಯ ಆರ್.ಕೆ ಇಮೋ ಸಿಂಗ್ ಚುನಾವಣಾ ಅಫಿಡವಿಟ್ ಸಲ್ಲಿಸಿದ್ದು ಇದರಲ್ಲಿ ತಮ್ಮ ಬಳಿ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂಬುದನ್ನು ಘೋಷಣೆ ಮಾಡಿದ್ದಾರೆ. ತಮ್ಮ ಮಾವ ಸಿಎಂ ಎನ್ ಬಿರೇನ್ ಸಿಂಗ್ಗಿಂತ ಇಮೋ ಸಿಂಗ್ ಐದು ಪಟ್ಟು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.
ಆರ್.ಕೆ ಇಮೋ ಸಿಂಗ್ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸಗೋಲ್ ಬಂದ್ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಮಣಿಪುರ ಸಿಎಂ ಬಿರೇನ್ ಸಿಂಗ್ 1,08,46,392 ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಆದರೆ ಅವರ ಅಳಿಯ ಆರ್.ಕೆ ಇಮೋ ಸಿಂಗ್ 5,10,94,917.93 ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಆರ್ಕೆ ಇಮೋ ಬಳಿ 1,14,37,779.93 ರೂಪಾಯಿ ಮೌಲ್ಯದ ಚರಾಸ್ಥಿ ಇದರಲ್ಲಿ 2,16,400 ರೂಪಾಯಿ ನಗದು, ಒಟ್ಟು 7 ಬ್ಯಾಂಕ್ ಖಾತೆಗಳಲ್ಲಿ 37 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಹೊಂದಿದ್ದಾರೆ. ಇವರ ಬಳಿಯಲ್ಲಿ ಎರಡು ಕಾರುಗಳು ಇವೆ. 6.5 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಜಿಪ್ಸಿ ಹಾಗೂ 16,68,905 ರೂಪಾಯಿ ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ ,18,38,688 ರೂಪಾಯಿ ಮೌಲ್ಯದ ಹಾರ್ಲೆ ಡೆವಿಡ್ಸನ್ ಬೈಕ್ನ್ನು ಹೊಂದಿದ್ದಾರೆ. ಇವರ ಬಳಿ ಶಾಟ್ ಗನ್ ಹಾಗೂ 38 ಪಿಸ್ತೂಲ್ ಇದೆ.