alex Certify ಮಣಿಪುರ ವಿಧಾನಸಭಾ ಚುನಾವಣಾ ಕಣಕ್ಕಿಳಿದ ಮೇರಿ ಕೋಮ್​ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣಿಪುರ ವಿಧಾನಸಭಾ ಚುನಾವಣಾ ಕಣಕ್ಕಿಳಿದ ಮೇರಿ ಕೋಮ್​ ಪತಿ

ಒಬ್ಬ ಸಂಗಾತಿಯಾಗಿ, ಪೋಷಕನಾಗಿ ಅತ್ಯದ್ಭುತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಒಲಿಂಪಿಕ್ಸ್​ ಪದಕ ವಿಜೇತೆ ಮೇರಿ ಕೋಮ್​ ಪತಿ ಕೆ. ಒಂಕೋಲರ್​​ ಮಣಿಪುರದ ಸೈಕೋಟ್​ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಒಂಕೋಲರ್​ ತಮ್ಮ ಚುನಾವಣಾ ಚಿಹ್ನೆಯಾಗಿ ಟಾರ್ಚ್​ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೇರಿ ಕೋಮ್​ರ ಪತಿಯ ಈ ಹೊಸ ಪ್ರಯತ್ನಕ್ಕೆ ಗ್ರಾಮಸ್ಥರು ಅಭೂತಪೂರ್ವ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಸಿಯಾಲ್​ಕೋಟದಿಂದ ಸಮುಲ್ಲಮನ್​ ಗ್ರಾಮಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ಒಂಕೋಲರ್​ರ ಬೆಂಬಲ ಸೂಚಿಸುವ ಸಾಕಷ್ಟು ಬ್ಯಾನರ್​ಗಳನ್ನು ಅಂಟಿಸಲಾಗಿದೆ.

ನಮ್ಮ ಗ್ರಾಮವು ಮೇರಿ ಕೋಮ್​ ಗ್ರಾಮ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ನಮ್ಮ ಗ್ರಾಮಕ್ಕೆ ಅಭಿವೃದ್ಧಿಯ ಅವಶ್ಯಕತೆ ಇದೆ. ಮೇರಿ ಕೋಮ್​ ಸಂಸದರಾದ ಬಳಿಕ ನಮ್ಮ ಗ್ರಾಮದಲ್ಲಿ ಕೆಲವು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಇನ್ನೂ ಹೆಚ್ಚಿನ ಅಭಿವೃದ್ಧಿಯ ಅಗತ್ಯವಿದೆ. ಇದಕ್ಕಾಗಿಯೇ ನಾವು ಒಂಕೋಲರ್​ರನ್ನು ವಿಧಾನಸಭಾ ಚುನಾವಣೆಯ ಕಣಕ್ಕಿಳಿಸುತ್ತಿದ್ದೇವೆ ಎಂದು ಸ್ಥಳೀಯ ಅಸಾಂಗ್​ ಲಾಂಗ್​ ಎಂಬವರು ಹೇಳಿದರು.

ಮೇರಿ ಕೋಮ್ ಗೆದ್ದಾಗ ನಾವು ಆನಂದಿಸಿದ್ದೇವೆ. ಸೋತಾಗ ದುಃಖಪಟ್ಟಿದ್ದೇವೆ. ಈ ಬಾರಿ ಒಂಕೋಲರ್​ ಗೆಲ್ಲಬೇಕೆಂದು ಆಶಿಸುತ್ತಿದ್ದೇವೆ. ಇಬ್ಬರ ವಿಚಾರವಾಗಿಯೂ ನಾವು ಹೆಮ್ಮೆ ಪಡುವಂತಾಗಬೇಕು. ನಮ್ಮ ಗ್ರಾಮಕ್ಕೆ ಇನ್ನಷ್ಟು ಅಭಿವೃದ್ಧಿಯ ಅವಶ್ಯಕತೆ ಇದೆ ಎಂದು ಮತ್ತೊಬ್ಬ ಗ್ರಾಮಸ್ಥ ಕ್ರಿಸ್ಟಿನಾ ಎಂಬವರು ಹೇಳಿದರು.

ಇನ್ನು ಈ ವಿಚಾರವಾಗಿ ಮಾತನಾಡಿದ ಮೇರಿಕೋಮ್​ ಪತಿ ಒಂಕೋಲರ್​, ನಾವು ಯಾವುದೇ ರೀತಿಯಲ್ಲಾದರೂ ಜನರಿಗಾಗಿ ಕೆಲಸ ಮಾಡಬೇಕೆಂದು ಬಯಸುತ್ತೇನೆ. ಈ ಬಾರಿ ಕೂಡ ನನಗೆ ಜನರೇ ಒತ್ತಾಯ ಮಾಡಿ ಕಣಕ್ಕಿಳಿಸಿದ್ದಾರೆ. ನಾನು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್​ ಸಿಗಬಹುದಾ ಎಂದು ಯತ್ನಿಸಿದೆ. ಆದರೆ ಯಾರೂ ನನಗೆ ಪಕ್ಷದಿಂದ ಟಿಕೆಟ್​ ನೀಡಲಿಲ್ಲ. ಹೀಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದು ಹೇಳಿದರು.

ಇನ್ನು ಚುನಾವಣೆಗೆ ಸ್ಪರ್ಧಿಸಲು ಪತ್ನಿಯ ಬೆಂಬಲ ಹೇಗಿದೆ ಎಂಬ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಮೇರಿಕೋಮ್​ ಕೂಡ ಸಂಸದೆಯಾಗಿರುವುದರಿಂದ ಅವರಿಗೆ ನನಗೆ ನೇರವಾಗಿ ಬೆಂಬಲ ನೀಡಲು ಸಾಧ್ಯವಾಗೋದಿಲ್ಲ. ಆದರೆ ಪರೋಕ್ಷವಾಗಿ ಮೇರಿ ಕೋಂ ಬೆಂಬಲ ನನಗಿದೆ. ನನ್ನ ಪ್ರತಿಯೊಂದು ಹೆಜ್ಜೆಗೂ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...