ದೇವರ ಕಾಣಿಕೆ ಹುಂಡಿಯಲ್ಲಿ ಕೆಲ ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಪತ್ರ ಹಾಕುತ್ತಾರೆ. ಈ ಪೈಕಿ ಕೆಲವೊಂದು ವಿಚಿತ್ರ ಬೇಡಿಕೆಗಳನ್ನು ಹೊಂದಿದ್ದು, ಅದರ ಒಂದು ಉದಾಹರಣೆ ಇಲ್ಲಿದೆ.
ಗುರುವಾರದಂದು ಚಿಕ್ಕಮಗಳೂರು ಜಿಲ್ಲೆಯ ಕಳಸಾದಲ್ಲಿರುವ ಕಳಸೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ನಡೆದಿದೆ. ಈ ಸಂದರ್ಭದಲ್ಲಿ ವಿಚಿತ್ರ ಬೇಡಿಕೆ ಇರುವ ಪತ್ರವೊಂದು ಸಿಕ್ಕಿದೆ.
ಇದನ್ನು ಹುಂಡಿಗೆ ಹಾಕಿರುವ ಭಕ್ತರೊಬ್ಬರು, ನನ್ನ ಮಗ ಮತ್ತು ಸೊಸೆ ಪ್ರೀತಿಯಿಂದ ಮಾತನಾಡಿಸಬೇಕು. ಸೊಸೆಯ ಮನಸ್ಸಿನಲ್ಲಿ ನಾವೆಲ್ಲ ಒಳ್ಳೆಯವರಂತೆ ಕಾಣಬೇಕು. ಅಲ್ಲದೆ ಅವರಿಬ್ಬರ ತಿಂಗಳ ಸಂಬಳ ನಮ್ಮ ಕೈಗೆ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.