alex Certify ಮಗುವಿಗೆ ಬಾಟಲಿಯಲ್ಲಿ ಹಾಲುಣಿಸುತ್ತಲೇ ಪ್ರೇಕ್ಷಕರತ್ತ ಹಾರಿ ಬಂದ ಬಾಲ್ ಕ್ಯಾಚ್ ಹಿಡಿದ ತಂದೆ..! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಬಾಟಲಿಯಲ್ಲಿ ಹಾಲುಣಿಸುತ್ತಲೇ ಪ್ರೇಕ್ಷಕರತ್ತ ಹಾರಿ ಬಂದ ಬಾಲ್ ಕ್ಯಾಚ್ ಹಿಡಿದ ತಂದೆ..! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಉಲ್ಲಾಸದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೂಪರ್ ಡ್ಯಾಡಿ ಎಂದು ಕರೆಸಿಕೊಂಡಿದ್ದಾನೆ.

ಹೌದು, ಬೇಸ್‌ಬಾಲ್ ಆಟದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮಗುವಿಗೆ ಬಾಟಲಿಯಲ್ಲಿ ಹಾಲು ಕುಡಿಸುತ್ತಿದ್ದ. ಈ ವೇಳೆ ಕ್ರೀಡಾಪಟು ಸಿಡಿಸಿದ ಬಾಲ್ ನೇರವಾಗಿ ಈತನ ಬಳಿ ಬಂದಿದೆ. ಆ ವ್ಯಕ್ತಿ ಹಿಡಿದಿರೋ ಬೆರಗುಗೊಳಿಸೋ ಕ್ಯಾಚ್ ಕಂಡು ಪ್ರಪಂಚದಾದ್ಯಂತದ ಜನರು ವಿಸ್ಮಯಗೊಂಡಿದ್ದಾರೆ. ಇದೀಗ ಅವರನ್ನು ವರ್ಷದ ತಂದೆ ಎಂದು ಪ್ರಶಂಸಿಸಲಾಗುತ್ತಿದೆ.

ಆಟದ ಸಮಯದಲ್ಲಿ ಅಭಿಮಾನಿಗಳು ಫೌಲ್ ಬಾಲ್ ಅನ್ನು ಹಿಡಿಯುವುದು ಹೊಸದೇನಲ್ಲ. ಆದರೆ, ಪುಟ್ಟ ಮಗುವಿನ ತಂದೆ ಒಂದು ಕೈಯಿಂದ ಮಗುವಿಗೆ ಬಾಟಲಿಯಲ್ಲಿ ಹಾಲು ಕುಡಿಸುತ್ತಿದ್ರೆ, ಇನ್ನೊಂದು ಕೈಯಿಂದ ಕ್ಯಾಚ್ ಪಡೆದಿದ್ದಾರೆ.

ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವು 5ನೇ ಇನ್ನಿಂಗ್ಸ್‌ನಲ್ಲಿ ಚೆಂಡನ್ನು ಪ್ರೇಕ್ಷಕರ ಕಡೆಗೆ ಹಾರುತ್ತಿರುವುದನ್ನು ತೋರಿಸುತ್ತದೆ. ಅನೇಕರು ಅದನ್ನು ಹಿಡಿಯಲು ನಿಂತಿದ್ದಾರೆ. ಆದರೂ, ತನ್ನ ಮಗುವನ್ನು ಹಿಡಿದುಕೊಂಡಿದ್ದ ವ್ಯಕ್ತಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿನ ಈ ವ್ಯಕ್ತಿ ಕ್ಯಾಚ್ ಹಿಡಿದಿರೋ ರೀತಿ ಕಂಡ ನೆಟ್ಟಿಗರು ಅವರಿಂದ ಪ್ರಭಾವಿತರಾಗಿದ್ದಾರೆ. ಅವರ ಅದ್ಭುತ ಕ್ಯಾಚ್ ನಿಂದ ಅವರ ಮಗನಿಗೆ ಉತ್ತಮ ನೆನಪುಗಳನ್ನು ಸೃಷ್ಟಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.

— Cincinnati Reds (@Reds) April 27, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...