alex Certify ‘ಮಗಳನ್ನೇ ಕೊಂದವರ ಮೇಲೆ ಕನಿಕರ ತೋರಬಾರದು’ : ಶೀನಾ ಬೋರಾ ವಿರುದ್ಧ ಸಿಬಿಐ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಗಳನ್ನೇ ಕೊಂದವರ ಮೇಲೆ ಕನಿಕರ ತೋರಬಾರದು’ : ಶೀನಾ ಬೋರಾ ವಿರುದ್ಧ ಸಿಬಿಐ ಹೇಳಿಕೆ

ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡುವುದನ್ನು ಸುಪ್ರೀಂ ಕೋರ್ಟ್​ನಲ್ಲಿ ವಿರೋಧಿಸಿದ ಸಿಬಿಐ ಮಗಳನ್ನೇ ಕೊಲ್ಲುವಂತಹ ಹೇಯ ಕೃತ್ಯ ಎಸಗಿದವರು ಮೃದು ಧೋರಣೆಗೆ ಅರ್ಹರಲ್ಲ ಎಂದು ವಾದಿಸಿದೆ.

ಇಂದ್ರಾಣಿ ಮುಖರ್ಜಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿರೋಧಿಸಿ ಅಫಿಡವಿಟ್​ ಸಲ್ಲಿಸಿದ ಸಿಬಿಐ, ಇಂದ್ರಾಣಿ ತಮ್ಮ ಮಗಳನ್ನೇ ಕೊಂದಿದ್ದಾರೆ, ಅಲ್ಲದೇ ತಮ್ಮ ಮಗನನ್ನೂ ಸಹ ಕೊಲ್ಲಲೂ ಯತ್ನಿಸಿದ್ದಾರೆ ಎಂದು ಹೇಳಿದೆ.

ಇಂದ್ರಾಣಿ ಸಮಾಜದಲ್ಲಿ ಓರ್ವ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಲ್ಲಳು ಎಂದು ಸಿಬಿಐ ಹೇಳಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಜೈಲಿನಿಂದ ಹೊರಬಂದು ಅವರು ಸಾಕ್ಷ್ಯ ನಾಶಗೊಳಿಸುವ ಸಾಧ್ಯತೆಯಿದೆ. ಹೀಗಾಗಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...