alex Certify ಮಗಳನ್ನು ರಕ್ಷಿಸಲು ಸೂಪರ್‌ ಹೀರೋ ಆದ ತಂದೆ, ಬೆಚ್ಚಿಬೀಳಿಸುವಂತಿದೆ ಈ ವೈರಲ್‌ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳನ್ನು ರಕ್ಷಿಸಲು ಸೂಪರ್‌ ಹೀರೋ ಆದ ತಂದೆ, ಬೆಚ್ಚಿಬೀಳಿಸುವಂತಿದೆ ಈ ವೈರಲ್‌ ವಿಡಿಯೋ….!

ಸಾಮಾಜಿಕ ಜಾಲತಾಣದಲ್ಲಿ ಬೆಚ್ಚಿ ಬೀಳಿಸುವಂಥ ವಿಡಿಯೋ ಒಂದು ವೈರಲ್‌ ಆಗಿದೆ. ಬಾಲಕಿಯೊಬ್ಬಳನ್ನು ತಂದೆಯೇ ಪ್ರಾಣಾಪಾಯದಿಂದ ಕಾಪಾಡಿದ ವಿಡಿಯೋ ಇದು. ಫುಟ್ಪಾತ್‌ ಮೇಲೆ ನಿಂತು ಬಾಲಕಿಯ ತಂದೆ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅದೇ ಸಮಯದಲ್ಲಿ ಕಾರೊಂದು ವೇಗವಾಗಿ ಚಲಿಸಿದೆ. ಅದರ ಬೆನ್ನಲ್ಲೇ ಬಾಲಕಿ ಸೈಕಲ್‌ ತುಳಿಯುತ್ತ ರಸ್ತೆ ದಾಟಿದ್ದಾಳೆ. ಆಕೆಯ ವೇಗ ಎಷ್ಟಿತ್ತೆಂದರೆ ಸೈಕಲ್‌ ಕೂಡ ನಿಯಂತ್ರಣಕ್ಕೆ ಸಿಗಲೇ ಇಲ್ಲ. ಅತಿ ವೇಗವಾಗಿ ಬಂದ ಸೈಕಲ್‌ ರಸ್ತೆ ಬದಿಯಲ್ಲಿದ್ದ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಅಷ್ಟರಲ್ಲಿ ಅಪಾಯ ಗಮನಿಸಿದ ಬಾಲಕಿಯ ತಂದೆ ಅಲ್ಲಿಂದ ಓಡಿ ಹೋಗಿ ಆಕೆಯನ್ನು ತಡೆದಿದ್ದಾನೆ.

ಆತ ಅಷ್ಟು ಚುರುಕಾಗಿ ರಿಯಾಕ್ಟ್‌ ಆಗದೇ ಇದ್ದರೆ ಬಾಲಕಿಯ ಪ್ರಾಣಕ್ಕೆ ಸಂಚಕಾರ ಬರುತ್ತಿತ್ತು. ಮಗಳನ್ನು ರಕ್ಷಿಸಲು ಅಪಾಯಕಾರಿ ಸಾಹಸ ಮಾಡಿದ ತಂದೆಗೆ ಕೊಂಚ ಏಟಾಗಿದೆ. ಅದೃಷ್ಟವಶಾತ್‌ ಬಾಲಕಿಗೆ ಏನೂ ಆಗಿಲ್ಲ. ದಿಢೀರನೆ ನಡೆದ ಘಟನೆಯಿಂದ ಬೆದರಿ ಕಂಗಾಲಾಗಿದ್ದ ತಂದೆ – ಮಗಳು ಇಬ್ಬರನ್ನೂ ಆತನ ಸ್ನೇಹಿತರು ಸಮಾಧಾನ ಮಾಡಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಮ್ನಲ್ಲಿ ವೈರಲ್‌ ಆಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ. ತಂದೆಯನ್ನು ನಿಜವಾದ ಸೂಪರ್ ಹೀರೋ ಎಂದು ಬಣ್ಣಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...