alex Certify ಮಕ್ಕಳ ಕಳ್ಳರ ರೂಪದಲ್ಲಿ ಪಾಠ; ಮನಮುಟ್ಟಿದ ಶಾಲೆಯಲ್ಲಿನ ಪ್ರಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಕಳ್ಳರ ರೂಪದಲ್ಲಿ ಪಾಠ; ಮನಮುಟ್ಟಿದ ಶಾಲೆಯಲ್ಲಿನ ಪ್ರಯೋಗ

ಅಪರಿಚಿತರಿಂದ ಏನನ್ನೂ ಸ್ವೀಕರಿಸಬಾರದು ಎಂದು ಬಾಲ್ಯದಲ್ಲಿ ಪೋಷಕರು ಮತ್ತು ಶಿಕ್ಷಕರು ಹೇಳಿಕೊಡುತ್ತಲೇ ಇರುತ್ತಾರೆ. ಅಪರಿಚಿತರಿಂದ ಎದುರಾಗುವ ಅಪಾಯವನ್ನು ಅರಿತೇ ಪದೇಪದೆ ಹೇಳುತ್ತಿರುತ್ತಾರೆ. ಇಲ್ಲೊಂದು ಶಾಲೆಯಲ್ಲಿ ಮಕ್ಕಳ ಮನ ಮುಟ್ಟಲು ಮಾಡಿದ ಪ್ರಯೋಗ ಗಮನ ಸೆಳೆಯುವಂತಿದೆ.

ಆಶು ಸಿಂಗ್​ ಎಂಬ ಹೆಸರಿನ ಲಿಂಕ್ಡ್​ಇನ್​ ಬಳಕೆದಾರರು ಶಾಲೆಯಲ್ಲಿ ಕಲಿಸುವ ಅದೇ ಪಾಠದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ, ಅದನ್ನು ಕಲಿಸುವ ರೀತಿಯನ್ನು ಮಕ್ಕಳು ಮರೆಯಲಾರರು.

1 ನಿಮಿಷ 14 ಸೆಕೆಂಡ್​ಗಳ ವೀಡಿಯೊದಲ್ಲಿ ಶಿಕ್ಷಕರೊಬ್ಬರು ನೀಲಿ ಬಣ್ಣದ ಗೌನ್​ ಧರಿಸಿರುವುದನ್ನು ವಿಡಿಯೋ ತೋರಿಸುತ್ತದೆ. ಹಾಗೆಯೇ ಅವರು ಮುಖವನ್ನು ಬಿಳಿ ಮತ್ತು ಕಪ್ಪು ಬಟ್ಟೆ ಬಳಸಿ ಮುಚ್ಚಲಾಗಿದೆ. ಶಿಕ್ಷಕರು ಮಗುವೊಂದಕ್ಕೆ ತಿಂಡಿ ಪೊಟ್ಟಣ ನೀಡುತ್ತಾರೆ, ಆ ಮಗು ಖುಷಿಯಿಂದ ಅದನ್ನು ತೆಗೆದುಕೊಂಡ ತಕ್ಷಣ, ಶಿಕ್ಷಕರು ಅವನನ್ನು ಅನಾಮತ್ತಾಗಿ ಹಿಡಿದು ಕೋಣೆಯಿಂದ ಹೊರಗೆ ಕರೆದೊಯ್ಯುತ್ತಾರೆ.

ಇದೇ ಡ್ರಿಲ್​ ಅನ್ನು ಪುನರಾವರ್ತಿಸಿದಾಗ, ಮುಸುಕುಧಾರಿ ಶಿಕ್ಷಕರು ತಿನಿಸುಗಳನ್ನು ಯಾರೂ ಸ್ವೀಕರಿಸುವುದಿಲ್ಲ. ಮಕ್ಕಳು ಪಾಠ ಕಲಿತಂತೆ ತೋರುತ್ತಿದೆ.

ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರಿಂದ ಹಲವಾರು ಕಾಮೆಂಟ್​ ಪಡೆದುಕೊಂಡಿದೆ. ನಮ್ಮ ಮಕ್ಕಳಿಗೆ ಪುಸ್ತಕ ಮತ್ತು ಕೇವಲ ಸೈದ್ಧಾಂತಿಕ ಜ್ಞಾನವನ್ನು ತುಂಬುವುದನ್ನು ನಿಲ್ಲಿಸಬೇಕಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...