ಅಪರಿಚಿತರಿಂದ ಏನನ್ನೂ ಸ್ವೀಕರಿಸಬಾರದು ಎಂದು ಬಾಲ್ಯದಲ್ಲಿ ಪೋಷಕರು ಮತ್ತು ಶಿಕ್ಷಕರು ಹೇಳಿಕೊಡುತ್ತಲೇ ಇರುತ್ತಾರೆ. ಅಪರಿಚಿತರಿಂದ ಎದುರಾಗುವ ಅಪಾಯವನ್ನು ಅರಿತೇ ಪದೇಪದೆ ಹೇಳುತ್ತಿರುತ್ತಾರೆ. ಇಲ್ಲೊಂದು ಶಾಲೆಯಲ್ಲಿ ಮಕ್ಕಳ ಮನ ಮುಟ್ಟಲು ಮಾಡಿದ ಪ್ರಯೋಗ ಗಮನ ಸೆಳೆಯುವಂತಿದೆ.
ಆಶು ಸಿಂಗ್ ಎಂಬ ಹೆಸರಿನ ಲಿಂಕ್ಡ್ಇನ್ ಬಳಕೆದಾರರು ಶಾಲೆಯಲ್ಲಿ ಕಲಿಸುವ ಅದೇ ಪಾಠದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ, ಅದನ್ನು ಕಲಿಸುವ ರೀತಿಯನ್ನು ಮಕ್ಕಳು ಮರೆಯಲಾರರು.
1 ನಿಮಿಷ 14 ಸೆಕೆಂಡ್ಗಳ ವೀಡಿಯೊದಲ್ಲಿ ಶಿಕ್ಷಕರೊಬ್ಬರು ನೀಲಿ ಬಣ್ಣದ ಗೌನ್ ಧರಿಸಿರುವುದನ್ನು ವಿಡಿಯೋ ತೋರಿಸುತ್ತದೆ. ಹಾಗೆಯೇ ಅವರು ಮುಖವನ್ನು ಬಿಳಿ ಮತ್ತು ಕಪ್ಪು ಬಟ್ಟೆ ಬಳಸಿ ಮುಚ್ಚಲಾಗಿದೆ. ಶಿಕ್ಷಕರು ಮಗುವೊಂದಕ್ಕೆ ತಿಂಡಿ ಪೊಟ್ಟಣ ನೀಡುತ್ತಾರೆ, ಆ ಮಗು ಖುಷಿಯಿಂದ ಅದನ್ನು ತೆಗೆದುಕೊಂಡ ತಕ್ಷಣ, ಶಿಕ್ಷಕರು ಅವನನ್ನು ಅನಾಮತ್ತಾಗಿ ಹಿಡಿದು ಕೋಣೆಯಿಂದ ಹೊರಗೆ ಕರೆದೊಯ್ಯುತ್ತಾರೆ.
ಇದೇ ಡ್ರಿಲ್ ಅನ್ನು ಪುನರಾವರ್ತಿಸಿದಾಗ, ಮುಸುಕುಧಾರಿ ಶಿಕ್ಷಕರು ತಿನಿಸುಗಳನ್ನು ಯಾರೂ ಸ್ವೀಕರಿಸುವುದಿಲ್ಲ. ಮಕ್ಕಳು ಪಾಠ ಕಲಿತಂತೆ ತೋರುತ್ತಿದೆ.
ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಹಲವಾರು ಕಾಮೆಂಟ್ ಪಡೆದುಕೊಂಡಿದೆ. ನಮ್ಮ ಮಕ್ಕಳಿಗೆ ಪುಸ್ತಕ ಮತ್ತು ಕೇವಲ ಸೈದ್ಧಾಂತಿಕ ಜ್ಞಾನವನ್ನು ತುಂಬುವುದನ್ನು ನಿಲ್ಲಿಸಬೇಕಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.