alex Certify ಮಕ್ಕಳೊಂದಿಗೆ ಬೀದಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ್ರು ನಟ ಅನುಪಮ್ ಖೇರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳೊಂದಿಗೆ ಬೀದಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ್ರು ನಟ ಅನುಪಮ್ ಖೇರ್..!

Anupam Kher's belated birthday celebration with 'street friends' impresses fans: 'So sweet'. Watch | Bollywood - Hindustan Times

ಸೋಮವಾರ 67 ನೇ ವರ್ಷಕ್ಕೆ ಕಾಲಿಟ್ಟ ನಟ ಅನುಪಮ್ ಖೇರ್, ತಮ್ಮ ಮುಂಬರುವ ಚಿತ್ರ ಉಂಚೈಗಾಗಿ ಮಾಧ್ ದ್ವೀಪದಲ್ಲಿ ದಿನವನ್ನು ಕಳೆದಿದ್ದಾರೆ. ಈ ವೇಳೆ ತಮ್ಮ ಸಹ-ನಟರಾದ ಡ್ಯಾನಿ ಡೆನ್‌ಜಾಂಗ್‌ಪಾ, ಬೊಮನ್ ಇರಾನಿ ಮತ್ತು ಅಮಿತಾಬ್ ಬಚ್ಚನ್ ಸೇರಿದಂತೆ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಆದರೂ ಕೂಡ ಅವರು ಮುಂಬೈಗೆ ಹಿಂದಿರುಗಿದ ನಂತರ ಬೀದಿಯಲ್ಲಿ ತಡವಾಗಿ ತಮ್ಮ ಸ್ನೇಹಿತರೊಂದಿಗೆ (ಮಕ್ಕಳೊಂದಿಗೆ) ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ತನ್ನ ತಡವಾದ ಹುಟ್ಟುಹಬ್ಬದ ಆಚರಣೆಯ ವಿಡಿಯೋವನ್ನು ನಟ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡ ನಟ, ತನ್ನ ತಡವಾದ ಹುಟ್ಟುಹಬ್ಬವನ್ನು ಆಚರಿಸಲು ಮತ್ತು ಸ್ನೇಹಿತರೊಂದಿಗೆ ಕೇಕ್ ಕತ್ತರಿಸಲು ತುಂಬಾ ಸಂತೋಷವಾಗಿದೆ. ತಾನು ನಿಜವಾಗಿಯೂ ಆಶೀರ್ವಾದ ಪಡೆದಿದ್ದೇನೆ ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ. ಖೇರ್ ತಮ್ಮ ಯುವ ಸ್ನೇಹಿತರೊಂದಿಗೆ ನಿಂತು, ಸ್ಟೂಲ್ ಮೇಲೆ ಇರಿಸಲಾದ ಕೇಕ್ ಅನ್ನು ಕತ್ತರಿಸಿ ಸಂಭ್ರಮಿಸಿದ್ದಾರೆ.

ತಮ್ಮ ಸ್ನೇಹಿತರನ್ನು ಪರಿಚಯಿಸುವ ಮೂಲಕ ವಿಡಿಯೋ ಆರಂಭಿಸಿದ ಖೇರ್, ದರ್ಶನಾ, ದಿವ್ಯಾ ಮತ್ತು ಯೋಗೇಶ್ ಅವರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾಗಿ ತಿಳಿಸಿದ್ದಾರೆ. ಅನುಪಮ್ ಖೇರ್ ಕೇಕ್ ಕತ್ತರಿಸುತ್ತಿದ್ದರೆ ಅಲ್ಲಿ ನೆರೆದಿದ್ದ ಮಕ್ಕಳು, ಹುಟ್ಟುಹಬ್ಬದ ಶುಭಾಶಯಗಳು ಗೀತೆಯನ್ನು  ಹಾಡಿದ್ದಾರೆ. ಅವರು ಪುಟ್ಟ ಹುಡುಗಿಗೆ ಕೇಕ್ ಅನ್ನು ಅರ್ಪಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಟನ ಒಳ್ಳೆಯತನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...