ಕಿತ್ತಳೆ ಹುಳಿ ಹಣ್ಣು. ಈ ಹಣ್ಣಿನ ಜೊತೆ ಹಾಲನ್ನು ನೀಡುವುದು ಅಪಾಯಕಾರಿ. ಕಿತ್ತಳೆ ಹಣ್ಣು ನೀಡಿದ ಎರಡರಿಂದ ಮೂರು ಗಂಟೆ ನಂತರ ಹಾಲನ್ನು ಮಕ್ಕಳಿಗೆ ಕುಡಿಸಬೇಕು.
ಪಪ್ಪಾಯಿ-ನಿಂಬೆ
ಪಪ್ಪಾಯಿ ಹಾಗೂ ನಿಂಬೆ ಹಣ್ಣನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ರಕ್ತಹೀನತೆ ಹಾಗೂ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಈ ಎರಡು ಹಣ್ಣನ್ನು ಒಟ್ಟಿಗೆ ಎಂದೂ ಮಕ್ಕಳಿಗೆ ನೀಡಬೇಡಿ.
ಸೀಬೆಕಾಯಿ-ಬಾಳೆಹಣ್ಣು
ಈ ಎರಡೂ ಹಣ್ಣನ್ನು ಒಟ್ಟಿಗೆ ತಿನ್ನುವುದರಿಂದ ಗ್ಯಾಸ್, ಅಸಿಡಿಟಿ ಸಮಸ್ಯೆ ಕಾಡುತ್ತದೆ. ಹೊಟ್ಟೆ ನೋವು ಹಾಗೂ ತಲೆನೋವು ಬರುವ ಸಾಧ್ಯತೆಯೂ ಇದೆ.
ಕಿತ್ತಳೆ-ಕ್ಯಾರೆಟ್
ಕಿತ್ತಳೆ ಹಣ್ಣು ಹಾಗೂ ಕ್ಯಾರೆಟ್ ಒಟ್ಟಿಗೆ ತಿನ್ನುವುದು ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಅನಾನಸ್-ಹಾಲು
ಅನಾನಸ್ ಹಾಗೂ ಹಾಲನ್ನು ಒಂದೇ ಬಾರಿ ಸೇವನೆ ಮಾಡುವುದರಿಂದ ದೇಹದಲ್ಲಿ ಹಾನಿಕಾರಕ ಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಇದು ಅತಿಸಾರಕ್ಕೆ ಕಾರಣವಾಗುತ್ತದೆ.