alex Certify ಮಕ್ಕಳಿಗೆ ಇಷ್ಟವಾಗುವ ದೂದ್ ಪೇಡಾ ಮನೆಯಲ್ಲೆ ಸುಲಭವಾಗಿ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಇಷ್ಟವಾಗುವ ದೂದ್ ಪೇಡಾ ಮನೆಯಲ್ಲೆ ಸುಲಭವಾಗಿ ಮಾಡಿ

ದೂದ್ ಪೇಡವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಇದನ್ನು ಮಾಡಿಕೊಂಡು ಮನೆಮಂದಿಯಲ್ಲಾ ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು: ಹಾಲು -1 ಲೀಟರ್, ಸಕ್ಕರೆ-1 ½ ಕಪ್, ಏಲಕ್ಕಿ ಪುಡಿ ಚಿಟಿಕೆ.

ಮಾಡುವ ವಿಧಾನ

ಒಂದು ದಪ್ಪ ತಳದ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ದಪ್ಪಗಿನ ಒಂದು ಲೀಟರ್ ಹಾಲು ಹಾಕಿ. ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ಕೈಬಿಡದೆ ಮಗುಚುತ್ತಾ ಇರಿ. ಹಾಲು ಗಟ್ಟಿಯಾಗುವವರಗೆ ಕೈಯಾಡಿಸುತ್ತಾ ಇರಿ. ಹಾಲು ಖೋವಾ ಹದಕ್ಕೆ ಬರಲಿ. ಹಾಲು ಸೀದು ಹೋಗದಂತೆ ನೋಡಿಕೊಳ್ಳಿ. ಇದಕ್ಕೆ 1 ½ ಕಪ್ ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ ಟ್ಟುಕೊಂಡು ಕೈಯಾಡಿಸಿ.

ನೀರಿನಾಂಶ ಸಂಪೂರ್ಣವಾಗಿ ಹೋದ ಮೇಲೆ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿ ಗ್ಯಾಸ್ ಆಫ್ ಮಾಡಿ. ನಂತರ ಇದು ತಣ್ಣಗಾಗುವುದಕ್ಕೆ ಬಿಟ್ಟು ಬಿಡಿ. ತಣ್ಣಗಾದ ನಂತರ ಗಟ್ಟಿಯಾಗುತ್ತದೆ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ನಿಮಗೆ ಯಾವ ಆಕಾರಕ್ಕೆ ಬೇಕೋ ಆ ಆಕಾರದಲ್ಲಿ ಪೇಡ ಮಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...