ನಮ್ಮ ಪಂಚೇಂದ್ರಿಯಗಳ ಗ್ರಹಿಕೆಗಳು ಒಂದಕ್ಕೊಂದು ಸಂಬಂಧಿತವಾಗಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಎರಡು ಅಥವಾ ಮೂರು ರೀತಿಯ ಗ್ರಹಿಕೆಗಳು ಒಮ್ಮೆಲೇ ಘಟಿಸುತ್ತವೆ.
ಮಂದ ಬೆಳಕಿನಲ್ಲಿ ತಿಂದರೆ ಊಟದ ರುಚಿ ಕಡಿಮೆ ಇದೆ ಎನಿಸುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ನೆದರ್ಲೆಂಡ್ಸ್‌ನ ಮಾಸ್ಟ್ರಿಚ್ ವಿವಿಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
ಮಂದ ಬೆಳಕಿಲ್ಲಿ ತಿಂದಾಗ ಸಪ್ಪೆ ಎನಿಸುವ ಅದೇ ಖಾದ್ಯ ಪ್ರಕಾಶಮಯ ಬೆಳಕಿನಡಿ ತಿಂದಾಗ ರುಚಿಕಟ್ಟಾಗಿದೆ ಎನಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ರೆಸ್ಟೋರೆಂಟ್ ಗಳಲ್ಲಿ ಬೆಳಕಿನ ಪ್ರಖರತೆಯನ್ನು ಬದಲಾಯಿಸಿದಾಗ ಅಲ್ಲಿ ತಿನ್ನುವ ಊಟದ ರುಚಿಯಲ್ಲೂ ಬದಲಾವಣೆ ಕಾಣುತ್ತದೆ ಎಂದು ಈ ಅಧ್ಯಯನದ ವರದಿಯನ್ನು ಮೇಲ್ ಆನ್ಲೈನ್‌ನಲ್ಲಿ ಮಾಡಲಾಗಿದೆ.