alex Certify ಮಂಗಳೂರಿನ ಮೊದಲ ಆಟೋ ಚಾಲಕ ಮೋಂತು ಲೋಬೊ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರಿನ ಮೊದಲ ಆಟೋ ಚಾಲಕ ಮೋಂತು ಲೋಬೊ ಇನ್ನಿಲ್ಲ

ಮಂಗಳೂರಿನ ಮೊದಲ ಆಟೋ ಚಾಲಕ ಎಂಬ ಹೆಗ್ಗಳಿಕೆ ಹೊಂದಿದ್ದ ಮೋಂತು ಲೋಬೊ ವಿಧಿವಶರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಲೋಬೊ ಶನಿವಾರ ಮೃತಪಟ್ಟಿದ್ದಾರೆ.

1955ರಲ್ಲಿ ಆಟೋ ಚಾಲನೆ ಆರಂಭಿಸಿದ ಇವರು, ಈ 66 ವರ್ಷಗಳ ಸುದೀರ್ಘ ಚಾಲನಾ ಬದುಕಿನಲ್ಲಿ ಈವರೆಗೆ ಒಂದೇ ಒಂದು ಅಪಘಾತ ಎಸಗದಿರುವುದು ಗಮನಾರ್ಹ ಸಂಗತಿ.

ಅಲ್ಲದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಇತಿಹಾಸವೂ ಇವರಿಗಿಲ್ಲ. ಜೊತೆಗೆ ಗರ್ಭಿಣಿಯರಿಗೆ ಇವರ ಆಟೋದಲ್ಲಿ ಉಚಿತ ಸಂಚಾರ ಸೇವೆ ಸಿಗುತ್ತಿತ್ತು. ಮೋಂತು ಲೋಬೋ ಅವರ ನಿಧನಕ್ಕೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...