alex Certify ಭೂಮಿ ಮೇಲಿರುವ ಅತ್ಯಂಥ ‘ಶುದ್ಧ ಆಹಾರ’ ಯಾವುದು ಗೊತ್ತಾ….? ಶತಶತಮಾನಗಳಿಂದ್ಲೂ ಭಾರತದ ಅಡುಗೆ ಮನೆಗಳಲ್ಲಿದೆ ಈ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿ ಮೇಲಿರುವ ಅತ್ಯಂಥ ‘ಶುದ್ಧ ಆಹಾರ’ ಯಾವುದು ಗೊತ್ತಾ….? ಶತಶತಮಾನಗಳಿಂದ್ಲೂ ಭಾರತದ ಅಡುಗೆ ಮನೆಗಳಲ್ಲಿದೆ ಈ ವಸ್ತು

ಪ್ರಪಂಚದಾದ್ಯಂತ ಲೆಕ್ಕವಿಲ್ಲದಷ್ಟು ಆಹಾರ ಪದಾರ್ಥಗಳಿವೆ. ಹಣ್ಣು, ತರಕಾರಿ, ಮಾಂಸ, ಮೊಟ್ಟೆ, ಅಕ್ಕಿ, ಧಾನ್ಯಗಳು ಹೀಗೆ ಬಗೆ ಬಗೆಯ ಆಹಾರಗಳನ್ನು ನಾವು ಸೇವಿಸುತ್ತೇವೆ. ಆದರೆ ಈ ಭೂಮಿಯಲ್ಲಿ ತಿನ್ನಲು ಸಿಗುವ ಅತ್ಯಂತ ಶುದ್ಧವಾದ ವಸ್ತು ಯಾವುದು ಎಂದು ನೀವು ಯೋಚಿಸಿದ್ದೀರಾ? ಕೆಲವರು ಹಣ್ಣು ಮತ್ತು ತರಕಾರಿಗಳು ಶುದ್ಧ ಎಂದು ಭಾವಿಸುತ್ತಾರೆ. ಆದರೆ ಸತ್ಯ ಬೇರೆಯೇ ಇದೆ. ಪ್ರಪಂಚದ ಅತ್ಯಂತ ಶುದ್ಧ ಆಹಾರ ಪದಾರ್ಥವನ್ನು ಭಾರತದ ಪ್ರತಿ  ಮನೆಯಲ್ಲೂ ಬಳಸಲಾಗುತ್ತಿದೆ.

BBC ವರದಿಯ ಪ್ರಕಾರ ಭೂಮಿಯ ಮೇಲಿನ ಶುದ್ಧ ಆಹಾರವೆಂದರೆ ‘ತುಪ್ಪ’. ಕೆಲವರು ಇದನ್ನು ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸುತ್ತಾರೆ. ಆದರೆ ತುಪ್ಪವು ಸಾವಿರಾರು ವರ್ಷಗಳಿಂದ ಆಹಾರದ ಪ್ರಮುಖ ಭಾಗವಾಗಿದೆ.  ಕೆಲವು ದಶಕಗಳಿಂದ ತುಪ್ಪದ ಸ್ಯಾಚುರೇಟೆಡ್ ಕೊಬ್ಬು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವದಂತಿಗಳು ಹರಡಿದ್ದವು. ಆದರೆ ಈಗ ಜನರ ಆಲೋಚನೆ ಬದಲಾಗಿದೆ, ತುಪ್ಪ ಭಾರತೀಯರ ಊಟದ ತಟ್ಟೆಗೆ ಮರಳಿದೆ.

ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಜನರು ತಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ಹೆಚ್ಚಿನ ಗಮನಹರಿಸಲಾರಂಭಿಸಿದ್ರು. ಆಗ ತುಪ್ಪಕ್ಕೆ ಪ್ರಾಮುಖ್ಯತೆ ಹೆಚ್ಚಾಯಿತು. ಇದು ಕೂಡ ‘ಸ್ಲೋ ಫುಡ್’ ಅಭಿಯಾನದ ಟ್ರೆಂಡ್‌ನ ಒಂದು ಭಾಗವಾಗಿದೆ. ಈ ಅಭಿಯಾನದ ಅಡಿಯಲ್ಲಿ, ತುಪ್ಪವನ್ನು ಸ್ಥಳೀಯ ಮಟ್ಟದಲ್ಲಿ ಮತ್ತು ಮನೆಯಲ್ಲಿಯೂ ಉತ್ಪಾದಿಸಬಹುದು, ಅದು ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಅನ್ನೋದು ಜನರಿಗೆ ಮನವರಿಕೆಯಾಗಿದೆ.

ಭಾರತದಲ್ಲಿ ತುಪ್ಪದ ಉತ್ಪಾದನೆ ನಿರಂತರವಾಗಿ ಹೆಚ್ಚುತ್ತಿದೆ. ಕೊರೋನಾ ಪ್ರಾರಂಭವಾದ ನಂತರ ತುಪ್ಪಕ್ಕೆ ಬೇಡಿಕೆ ಶೇ. 25 ರಿಂದ 30 ರಷ್ಟು ಹೆಚ್ಚಾಗಿದೆ. ತುಪ್ಪವನ್ನು ಪೂಜಾ ಕೈಂಕರ್ಯಗಳಲ್ಲಿಯೂ ಬಳಸಲಾಗುತ್ತದೆ. ತುಪ್ಪಕ್ಕೂ ಜನರ ನಂಬಿಕೆಗೂ ಸಂಬಂಧವಿದೆ. ಪುರಾಣಗಳ ಪ್ರಕಾರ, ವೈದಿಕ ದೇವರಾದ ಪ್ರಜಾಪತಿ ದಕ್ಷನು ತನ್ನ ಎರಡೂ ಕೈಗಳನ್ನು ಉಜ್ಜುವ ಮೂಲಕ ಮೊದಲ ಬಾರಿಗೆ ತುಪ್ಪವನ್ನು ಮಾಡಿದನು. ಈ ತುಪ್ಪವನ್ನು ಬೆಂಕಿಯಲ್ಲಿ ಹಾಕುವ ಮೂಲಕ ಅವನು ತನ್ನ ಮಕ್ಕಳನ್ನು ಸೃಷ್ಟಿಸಿದನು.

ತುಪ್ಪ ಭಾರತೀಯ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ಹಿಂದೂ ವಿವಾಹದಿಂದ ಹಿಡಿದು ಎಲ್ಲಾ ರೀತಿಯ ಶುಭ ಕಾರ್ಯಗಳಿಗೆ, ಹವನ, ಹೋಮಗಳಿಗೆ ತುಪ್ಪವನ್ನು ಅರ್ಪಿಸಲಾಗುತ್ತದೆ. ತುಪ್ಪವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಆಯುರ್ವೇದದಲ್ಲಿ ತುಪ್ಪವನ್ನು ಆರೋಗ್ಯಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ತುಪ್ಪದ ಪೌಷ್ಟಿಕಾಂಶದ ಗುಣದಿಂದಾಗಿ ಇದನ್ನು ಬಹುತೇಕ ಮನೆಗಳಲ್ಲಿ ಬಳಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...