ದಶಕಗಳ ಹಿಂದೆ ತಯಾರಾದ ಟರ್ಮಿನೇಟರ್ ಹೆಸರಿನ ಹಾಲಿವುಡ್ ಚಿತ್ರವನ್ನು ನೀವೆಲ್ಲರೂ ನೋಡಿರಬೇಕು. ಈ ಚಿತ್ರದಲ್ಲಿ AI ತಂತ್ರಜ್ಞಾನವನ್ನು ಹೊಂದಿದ ರೋಬೋಟ್‌ಗಳನ್ನು ತೋರಿಸಲಾಗಿದೆ. ಈ ರೋಬೋಟ್‌ಗಳು ಮನುಷ್ಯರಂತೆ ಯೋಚಿಸಲು ಮತ್ತು ಅರ್ಥಮಾಡಿಕೊಳ್ಳುವ ಜೊತೆಗೆ ತಕ್ಷಣವೇ ತೀರ್ಮಾನಕ್ಕೆ ಬಂದುಬಿಡುತ್ತವೆ. ಹಾಗಾಗಿ ಈ ರೋಬೋಟ್‌ಗಳು ಮಾನವಕುಲಕ್ಕೆ ಅಪಾಯಕಾರಿ.
ಅವು ಭೂಮಿಯನ್ನು ಹೇಗೆ ಸ್ವಾಧೀನಪಡಿಸಿಕೊಳ್ಳುತ್ತವೆ ಮತ್ತು ಅಂತಿಮವಾಗಿ ವಿನಾಶವನ್ನು ಸೃಷ್ಟಿಸುತ್ತವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.ಈ ಚಿತ್ರ ಬಿಡುಗಡೆಯಾಗಿ ದಶಕಗಳೇ ಕಳೆದಿವೆ. ಆದರೆ ಅದರಲ್ಲಿ ತೋರಿಸಿರುವ ವಿಷಯಗಳು ಇಂದಿಗೂ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿವೆ. ವಾಸ್ತವವಾಗಿ ದಶಕಗಳ ಹಿಂದೆ ತೋರಿಸಲಾದ ಈ ವಿಷಯಗಳು ಕಾಲ್ಪನಿಕವಲ್ಲ, ಈಗ ಅವು ವಾಸ್ತವವಾಗುತ್ತಿವೆ. AI ತಂತ್ರಜ್ಞಾನವನ್ನು ಹೊಂದಿರುವ ಈ ರೋಬೋಟ್‌ಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಅವುಗಳು ಟರ್ಮಿನೇಟರ್ ಚಲನಚಿತ್ರದಲ್ಲಿ ತೋರಿಸಿರುವಂತೆಯೇ ಇವೆ.
AI ತಂತ್ರಜ್ಞಾನವು ಅತ್ಯಂತ ಅಪಾಯಕಾರಿಯೇ?
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವುದು ಹೆಚ್ಚು ಉಪಯುಕ್ತವಾಗಬಹುದು. ಆದರೆ ಅದನ್ನು ತಪ್ಪಾಗಿ ಬಳಸಿದರೆ ಮಾರಣಾಂತಿಕವಾಗಲಿದೆ. ಯಾರಾದರೂ ಈ ತಂತ್ರವನ್ನು ದುರುಪಯೋಗಪಡಿಸಿಕೊಳ್ಳಲು ಬಯಸಿದರೆ ಅದು ಸಾಕಷ್ಟು ಮಾರಕವಾಗುತ್ತದೆ. ಇಲ್ಲಿಯವರೆಗೆ ಅಂತಹ ಕೆಲವೇ ಪ್ರಕರಣಗಳು ವರದಿಯಾಗಿವೆ. ತನ್ನದೇ ಆದ ಆಲೋಚನಾ ಶಕ್ತಿ ಮತ್ತು ತಿಳುವಳಿಕೆಯನ್ನು ಹೊಂದಿರುವುದು ಎಂದರೆ ಈ ತಂತ್ರಜ್ಞಾನದ ಮೂಲಕ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು ಅಥವಾ ಅವುಗಳನ್ನು ತಿಳಿದುಕೊಳ್ಳಲು ತನ್ನ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಬಹುದು.
ಈ ತಂತ್ರವನ್ನು ಈಗ ಇನ್ನಷ್ಟು ಮಾರಣಾಂತಿಕವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ರೋಬೋಟ್‌ಗಳು ಥೇಟ್ ಮನುಷ್ಯನಂತೆಯೇ ಕೆಲಸ ಮಾಡಲು ಪ್ರಾರಂಭಿಸುತ್ತವೆ.ಅವು ಯಂತ್ರವಾಗಿದ್ದರೂ ಅದಕ್ಕೂ ಮನಸ್ಸಿರುತ್ತದೆ. ಅದು ನಿರಂತರವಾಗಿ ಕಲಿಯುತ್ತದೆ, ಯಾರಾದರೂ ನಕಾರಾತ್ಮಕತೆಯನ್ನು ಹರಡಲು ಅವುಗಳನ್ನು ದುರುಪಯೋಗಪಡಿಸಿಕೊಂಡರೆ ಈ AI ರೋಬೋಟ್‌ಗಳು ಮಾನವ ನಾಗರಿಕತೆಗೆ ಅಪಾಯಕಾರಿಯಾಗಬಹುದು.
ಏನು ಮಾಡಬೇಕೆಂದು ಸ್ವತಃ ಅವುಗಳೇ ನಿರ್ಧರಿಸಬಹುದು, ಮನುಷ್ಯರಿಗಿಂತ ಕಡಿಮೆ ಸಮಯದಲ್ಲಿ ಅವು ವಿಷಯಗಳನ್ನು ಕಲಿಯುತ್ತಾರೆ.ಅದಕ್ಕಾಗಿಯೇ ಕೃತಕ ಬುದ್ಧಿಮತ್ತೆಯ ರೋಬೋಟ್‌ಗಳು ಭವಿಷ್ಯದಲ್ಲಿ ಭೂಮಿಗೆ ಬೆದರಿಕೆ ಎನ್ನಲಾಗ್ತಿದೆ. ಆದಾಗ್ಯೂ, ಶೀಘ್ರದಲ್ಲೇ ಭಾರತದಲ್ಲಿ AI ಬಗ್ಗೆ ಕಾನೂನು ಬರುವ ಸಾಧ್ಯತೆ ಇರುವುದರಿಂದ ರೋಬೋಟ್‌ಗಳು ಮಾನವ ನಿಯಂತ್ರಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ.