
ಈ ಅದ್ಭುತ ವಿದ್ಯಮಾನವನ್ನು ಸನ್ ಡಾಗ್ ಎಂದು ಕರೆಯುತ್ತಾರೆ. ಇದು ವಾತಾವರಣದಲ್ಲಿನ ಐಸ್ ಸ್ಫಟಿಕಗಳ ಮೂಲಕ ಬೆಳಕನ್ನು ವಕ್ರೀಭವನಗೊಳಿಸಿದಾಗ ಸಂಭವಿಸುತ್ತದೆ. ಅವು ಬೆಳಕಿನ ಬಣ್ಣದ ಚುಕ್ಕೆಗಳಾಗಿದ್ದು, ಸೂರ್ಯನ ಸುತ್ತ ಬೆಳಕಿನ ಉಂಗುರದಂತೆಯೂ ಕಂಡುಬರುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು ಕೆಲಿಡೋಸ್ಕೋಪ್ ಪರಿಣಾಮವಾಗಿದೆ.
ಬುಧವಾರ ಮಧ್ಯಾಹ್ನ ಅಮೆರಿಕಾದ ಮಿನ್ನೇಸೋಟ ರಾಜ್ಯದಲ್ಲಿ ಈ ರೀತಿಯ ಸೂರ್ಯನ ಬೆಳಕು ಕಾಣಿಸಿದೆ. ಹವ್ಯಾಸಿ ಛಾಯಾಗ್ರಾಹಕ ಕರೋಲ್ ಬಾಯರ್ ತನ್ನ ಕ್ಯಾಮರಾದಲ್ಲಿ ಅಪರೂಪದ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ಅದ್ಭುತ ದೃಶ್ಯದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರಿ ವೈರಲ್ ಆಗಿದೆ.
ಆಕಾಶದಲ್ಲಿ ಸೂರ್ಯನ ಬೆಳಕು ಈ ರೀತಿಯಾಗಿ ಕಾಣಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಜೂನ್‌ನಲ್ಲಿ, ಹೈದರಾಬಾದ್ ನಲ್ಲಿ ಮಧ್ಯಾಹ್ನದ ಸಮಯದಲ್ಲಿ ಅತ್ಯಂತ ಅಪರೂಪದ ಮಳೆಬಿಲ್ಲಿನ ಬಣ್ಣದ ಸೂರ್ಯನ ಪ್ರಭಾವಲಯ ಕಂಡುಬಂದಿತ್ತು. ಅದ್ಭುತ ಆಪ್ಟಿಕಲ್ ವಿದ್ಯಮಾನವನ್ನು ಮೇ 2021 ರಲ್ಲಿ ಬೆಂಗಳೂರಿನ ನಿವಾಸಿಗಳು ಸಹ ವೀಕ್ಷಿಸಿದ್ದಾರೆ.
ಚಂದ್ರನ ಸುತ್ತ ಪ್ರಭಾವಲಯ ಕಾಣಿಸಿಕೊಂಡ್ರೆ, ಅದನ್ನು ಚಳಿಗಾಲದ ಪ್ರಭಾವಲಯ ಅಥವಾ ಚಂದ್ರನ ಉಂಗುರ ಎಂದು ಕರೆಯಲಾಗುತ್ತದೆ.