ಮೀರ್ ಉಸ್ಮಾನ್ ಅಲಿ ಖಾನ್ ಅವರು 50 ರೋಲ್ಸ್ ರಾಯ್ಸ್ ಅನ್ನು ಹೊಂದಿದ್ದರು ಅಂತಾ ವರದಿಯಾಗಿದೆ. ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಲಿಮಿಟೆಡ್ ತಮ್ಮ ಕಾರನ್ನು ಮೀರ್ ಉಸ್ಮಾನ್‌ಗೆ ಮಾರಾಟ ಮಾಡಲು ನಿರಾಕರಿಸಿತ್ತು. ಇದರಿಂದ ಕುಪಿತನಾದ ನವಾಬ, ಕೆಲವು ಹಳೆಯ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿ ಕಸ ಸಂಗ್ರಹಕ್ಕೆ ಬಳಸಿದ್ದನು. ಇದು ಬ್ರಿಟಿಷ್ ಐಷಾರಾಮಿ ವಾಹನ ತಯಾರಕನ ಇಮೇಜ್ ಅನ್ನು ಹಾನಿಗೊಳಿಸಿತು ಎಂದು ಹೇಳಲಾಗುತ್ತದೆ.
ಭಾರತವು ಆಕ್ರಮಣ ಮಾಡುವವರೆಗೂ ಹೈದರಾಬಾದ್ ಅನ್ನು ಆಳಿದ ಏಳು ನಿಜಾಮರಲ್ಲಿ ಮೀರ್ ಉಸ್ಮಾನ್ ಕೊನೆಯವರು.
ಮೀರ್ ಉಸ್ಮಾನ್ ಡಾಲರ್ 100 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ವೈಯಕ್ತಿಕ ಚಿನ್ನದ ಸಂಗ್ರಹವನ್ನು ಹೊಂದಿದ್ದರು. ಮತ್ತು ಡಾಲರ್ 400 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಆಭರಣಗಳನ್ನು ಹೊಂದಿದ್ದರು. ಇಂದು $95 ಮಿಲಿಯನ್ ಮೌಲ್ಯದ ಪ್ರಸಿದ್ಧ ಜಾಕೋಬ್ ಡೈಮಂಡ್ ಕೂಡ ಅವರ ಬಳಿಯಿತ್ತು.
ಹೈದರಾಬಾದ್ ಹೈಕೋರ್ಟ್, ಸೆಂಟ್ರಲ್ ಲೈಬ್ರರಿ (ಹಿಂದೆ ಅಸಾಫಿಯಾ ಲೈಬ್ರರಿ ಎಂದು ಕರೆಯಲಾಗುತ್ತಿತ್ತು) ಮತ್ತು ಅಸೆಂಬ್ಲಿ ಹಾಲ್, ಸ್ಟೇಟ್ ಮ್ಯೂಸಿಯಂ ಮತ್ತು ನಿಜಾಮಿಯಾ ವೀಕ್ಷಣಾಲಯ ಸೇರಿದಂತೆ ಹೈದರಾಬಾದ್‌ನಲ್ಲಿನ ಅನೇಕ ಪ್ರಮುಖ ಸಾರ್ವಜನಿಕ ಕಟ್ಟಡಗಳ ಅಭಿವೃದ್ಧಿಗೆ ನವಾಬನ ಆಳ್ವಿಕೆ ಸಲ್ಲುತ್ತದೆ.
1911 ರಲ್ಲಿ ಅವರಿಗೆ ನೈಟ್ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಸ್ಟಾರ್ ಆಫ್ ಇಂಡಿಯಾ ಎಂಬ ಬಿರುದನ್ನು ನೀಡಲಾಯಿತು.
1917 ರಲ್ಲಿ, ಅವರಿಗೆ ಬ್ರಿಟಿಷ್ ಸಾಮ್ರಾಜ್ಯದ ನೈಟ್ ಗ್ರ್ಯಾಂಡ್ ಕ್ರಾಸ್ ಎಂಬ ಬಿರುದನ್ನು ನೀಡಲಾಯಿತು.
1946 ರಲ್ಲಿ ಅವರಿಗೆ ರಾಯಲ್ ವಿಕ್ಟೋರಿಯಾ ಚೈನ್ ನೀಡಲಾಯಿತು.
ಭಾರತ ಸ್ವಾತಂತ್ರ್ಯಾ ನಂತರ, ದೇಶದ ಏಕೀಕರಣದ ಪ್ರಯತ್ನಗಳು ಪ್ರಾರಂಭವಾದಾಗ ನವಾಬ್ ತನ್ನ ಸಾಮ್ರಾಜ್ಯವನ್ನು ತೊರೆದು 1948 ರಲ್ಲಿ ಭಾರತೀಯ ಗಣರಾಜ್ಯಕ್ಕೆ ಸೇರಿದ್ರು. ಹೈದರಾಬಾದ್ ಅನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಿದ ನಂತರ ನಿಜಾಮನ ಆದಾಯದ ಮೂಲಗಳು ಕಡಿಮೆಯಾಗುತ್ತಾ ಹೋದವು.