alex Certify ಭಾರತದ ಮೊದಲ ಸೋಲಾರ್‌ ಕಾರು ಇದು; 45 ನಿಮಿಷ ಚಾರ್ಜ್‌ ಮಾಡಿದ್ರೆ ಓಡುತ್ತೆ 250 ಕಿಮೀ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮೊದಲ ಸೋಲಾರ್‌ ಕಾರು ಇದು; 45 ನಿಮಿಷ ಚಾರ್ಜ್‌ ಮಾಡಿದ್ರೆ ಓಡುತ್ತೆ 250 ಕಿಮೀ…!

ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2023 ರಲ್ಲಿ ಹಲವು ವಿಶೇಷ ರೀತಿಯ ವಾಹನಗಳನ್ನು ಪರಿಚಯಿಸಲಾಗಿದೆ. ಪುಣೆಯ ಸ್ಟಾರ್ಟಪ್ ಕಂಪನಿ ವೇವ್ ಮೊಬಿಲ್ಟಿ ಭಾರತದ ಮೊದಲ ಸೋಲಾರ್ ಕಾರನ್ನು (ಇವಿಎ) ಲಾಂಚ್‌ ಮಾಡಿದೆ.

ಈ ಕಾರಿನೊಳಗೆ ಇಬ್ಬರು ವಯಸ್ಕರು ಮತ್ತು 1 ಮಗು ಕುಳಿತುಕೊಳ್ಳಬಹುದು. ವಿಶೇಷವೆಂದರೆ ಕಾರನ್ನು 45 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಿ 250 ಕಿಮೀ ಓಡಿಸಬಹುದು. ಇದು ಬ್ಯಾಟರಿ ಚಾಲಿತ ಸಿಂಗಲ್ ಡೋರ್ ಕಾರು. ಗಾತ್ರದಲ್ಲಿ ಟಾಟಾ ನ್ಯಾನೋವನ್ನು ಹೋಲುತ್ತದೆ.

ವಾಸ್ತವವಾಗಿ ಇದು ಎಲೆಕ್ಟ್ರಿಕ್ ಕಾರಿದ್ದಂತೆ. ಕುತೂಹಲಕಾರಿ ಸಂಗತಿಯೆಂದರೆ ಇದರಲ್ಲಿ ನೀವು ಕಾರಿನ ಮೇಲೆ ಅಳವಡಿಸಬಹುದಾದ ಸೋಲಾರ್ ರೂಫ್ ಪ್ಯಾನೆಲ್‌ಗಳ ಆಯ್ಕೆಯೂ ಇದೆ. ಸೌರ ಮೇಲ್ಛಾವಣಿಯು ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕಾರನ್ನು ತೆರೆದ ಸ್ಥಳದಲ್ಲಿ ನಿಲ್ಲಿಸಬೇಕು. ಕಂಪನಿಯು ಸೋಲಾರ್ ರೂಫ್ ಅನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತದೆ. ಸದ್ಯ ಇದೊಂದು ಮೂಲ ಮಾದರಿಯಷ್ಟೆ. ಈ ಸೋಲಾರ್‌ ಕಾರಿನ ಪರೀಕ್ಷೆ ನಡೆಯುತ್ತಿದೆ. 2024ರ ಆರಂಭದಲ್ಲಿ ಇದನ್ನು ಬಿಡುಗಡೆ ಮಾಡಬಹುದು. ಇದು 6 kW ಲಿಕ್ವಿಡ್-ಕೂಲ್ಡ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ.

14 kWh ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಒಮ್ಮೆ ಫುಲ್‌ ಚಾರ್ಜ್‌ ಮಾಡಿದ್ರೆ 250 ಕಿಮೀ ಚಲಿಸುವ ಸಾಮರ್ಥ್ಯ ಇದಕ್ಕಿದೆ. ಈ ಕಾರನ್ನು ಮನೆಯ ಸಾಕೆಟ್‌ನಿಂದ 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಸಂಯೋಜಿತ ಚಾರ್ಜಿಂಗ್ ವ್ಯವಸ್ಥೆಯ ಮೂಲಕ, 45 ನಿಮಿಷಗಳಲ್ಲಿ 80 ಪ್ರತಿಶತ ಚಾರ್ಜ್ ಮಾಡಬಹುದು. ಕಾರಿನ ಮುಂಭಾಗದಲ್ಲಿ ಒಂದೇ ಸೀಟನ್ನು ಮತ್ತು ಹಿಂಭಾಗದಲ್ಲಿ ಸ್ವಲ್ಪ ದೊಡ್ಡ ಸೀಟನ್ನು ಅಳವಡಿಸಲಾಗಿದೆ. Android Auto ಮತ್ತು Apple CarPlay ಈ ಕಾರಿನಲ್ಲಿದೆ. ಕಂಪನಿ ಮುಂದಿನ ವರ್ಷ ಪುಣೆ ಮತ್ತು ಬೆಂಗಳೂರಿನಲ್ಲಿ ಇವುಗಳನ್ನು ಪರಿಚಯಿಸಲಿದೆ. ಕಾರಿನ ಬೆಲೆಯನ್ನು ಸಹ ಮುಂಬರುವ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...