alex Certify ಭಾರತದ ಮೊದಲ ಕೋಟ್ಯಾಧಿಪತಿ ಈತ : ಶತಕೋಟಿ ಮೌಲ್ಯದ ಆಭರಣ, ವಜ್ರದ ಗಣಿ, 50 ರೋಲ್ಸ್-ರಾಯ್ಸ್ ಕಾರುಗಳ ಮಾಲೀಕ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮೊದಲ ಕೋಟ್ಯಾಧಿಪತಿ ಈತ : ಶತಕೋಟಿ ಮೌಲ್ಯದ ಆಭರಣ, ವಜ್ರದ ಗಣಿ, 50 ರೋಲ್ಸ್-ರಾಯ್ಸ್ ಕಾರುಗಳ ಮಾಲೀಕ !

ಭಾರತದಲ್ಲಿ ಸದ್ಯ ಅತ್ಯಂತ ಶ್ರೀಮಂತ ವ್ಯಕ್ತಿ ಎಂದರೆ ಉದ್ಯಮಿ ಮುಖೇಶ್‌ ಅಂಬಾನಿ. ಆದರೆ ಭಾರತದ ಮೊದಲ ಕೋಟ್ಯಾಧಿಪತಿ ಯಾರು ಗೊತ್ತಾ ? ಆತ ತಮ್ಮದೇ ಆದ ವಜ್ರದ ಗಣಿಗಳನ್ನು ಹೊಂದಿದ್ದರು. ಶತಕೋಟಿ ಮೌಲ್ಯದ ಆಭರಣ ಅವರ ಬಳಿಯಿತ್ತು. ಭವ್ಯತೆ, ಆಡಂಬರದ ಜೀವನಶೈಲಿ ಮತ್ತು ಐಷಾರಾಮಿ ಬದುಕಿಗೆ ಆತ ಹೆಸರುವಾಸಿಯಾಗಿದ್ದರು. ಅವರೇ  ಹೈದರಾಬಾದಿನ ನಿಜಾಮನಾಗಿದ್ದ ಮೀರ್ ಒಸ್ಮಾನ್ ಅಲಿ ಖಾನ್.

ಹೈದರಾಬಾದಿನ ನಿಜಾಮರು 1724-1948ರವರೆಗೆ 224 ವರ್ಷಗಳ ಕಾಲ ರಾಜ್ಯವನ್ನು ಆಳಿದ್ದಾರೆ. ಈ ನಿಜಾಮರು ಇತಿಹಾಸದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಅಪಾರ ಸಂಪತ್ತಿನ ಜೊತೆಗೆ ವಿಲಾಸಿ ಜೀವನ ಅವರದ್ದಾಗಿತ್ತು. ಈಸ್ಟ್ ಇಂಡಿಯಾ ಕಂಪನಿಯ ಪ್ರಕಾರ, ಭಾರತದ ಮೊದಲ ಮತ್ತು ಶ್ರೀಮಂತ ಬಿಲಿಯನೇರ್ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್. ಈತನ ಒಟ್ಟಾರೆ ಆಸ್ತಿ 230 ಬಿಲಿಯನ್ ಡಾಲರ್‌ ಎಂದು ಹೇಳಲಾಗುತ್ತದೆ.

25ನೇ ವಯಸ್ಸಿನಲ್ಲಿ ಸಿಂಹಾಸನವನ್ನು ಏರಿದ ಉಸ್ಮಾನ್ ಅಲಿ ಖಾನ್ 1911 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯ ನಿಜಾಮರ ಆಳ್ವಿಕೆಯಿಂದ ಮುಕ್ತವಾಗುವವರೆಗೂ ಹೈದರಾಬಾದ್ ಅನ್ನು ಆಳಿದರು. ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ನಿಜಾಮರ ದೊಡ್ಡ ಆದಾಯದ ಮೂಲವೆಂದರೆ ಗೋಲ್ಕೊಂಡದ ಗಣಿಗಳು. ಆ ಸಮಯದಲ್ಲಿ ಈತ ವಜ್ರಗಳ ಏಕೈಕ ಪೂರೈಕೆದಾರರಾಗಿದ್ದರು.

ಕೊನೆಯ ನಿಜಾಮನು ಸಿಂಹಾಸನವನ್ನೇರಿದ ಮೂರು ವರ್ಷಗಳ ನಂತರ 1914ರಲ್ಲಿ ಮೊದಲನೆಯ ಮಹಾಯುದ್ಧ ಪ್ರಾರಂಭವಾಯಿತು. ಉಸ್ಮಾನ್‌, ಬ್ರಿಟಿಷರಿಗೆ ಯುದ್ಧದಲ್ಲಿ ಸೈನ್ಯ ಮತ್ತು ಆರ್ಥಿಕವಾಗಿ ಸಹಾಯ ಮಾಡಿದ್ದರು. 1917 ರಲ್ಲಿ ಹೈದರಾಬಾದ್‌ನಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಇವರ ಪಾತ್ರವಿದೆ. ಉಸ್ಮಾನ್‌ ಸರಳವಾದ ಬಟ್ಟೆಗಳನ್ನು ಧರಿಸುತ್ತಿದ್ದರು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತಿದ್ದರು. ತಮ್ಮದೇ ಆದ ಕರೆನ್ಸಿಯನ್ನು ಹೊಂದಿದ್ದರು.

ಅವರ ಬಳಿ 100 ಮಿಲಿಯನ್ ಪೌಂಡ್ ಚಿನ್ನ, 400 ಮಿಲಿಯನ್ ಪೌಂಡ್ ಆಭರಣಗಳಿದ್ದವಂತೆ. ಸ್ವಂತ ವಿಮಾನಯಾನ ಸಂಸ್ಥೆಯನ್ನು ಹೊಂದಿದ್ದರು. ಆತ 300 ವಜ್ರಗಳಿರುವ ವಜ್ರದ ನೆಕ್ಲೇಸ್ ಸೆಟ್ ಅನ್ನು ರಾಣಿ ಎಲಿಜಬೆತ್ II ಗೆ ಮದುವೆಯ ಉಡುಗೊರೆಯಾಗಿ ನೀಡಿದ್ದರಂತೆ. ಅಷ್ಟೇ ಅಲ್ಲ ಉಸ್ಮಾನ್ ಅಲಿ ಖಾನ್ ಅವರು 1000 ಕೋಟಿ ಮೌಲ್ಯದ ವಜ್ರವನ್ನು ಪೇಪರ್ ವೇಯ್ಟ್‌ ಆಗಿ ಬಳಸಿದ್ದರು.

ಅವರ ಬಳಿ 50 ರೋಲ್ಸ್ ರಾಯ್ಸ್ ಕಾರುಗಳಿದ್ದವು. 1940ರ ದಶಕದ ಆರಂಭದಲ್ಲಿ, ನಿಜಾಮನ ಒಟ್ಟು ಆಸ್ತಿ ಸುಮಾರು 1700 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. 2023ರಲ್ಲಿ ಇದರ ಮೌಲ್ಯ 29,57,70 ಕೋಟಿ ರೂಪಾಯಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...